ಸತ್ತಿದ್ದು ನೇತಾಜಿಯಲ್ಲ, ನೆಹರೂ! Part 1 

ಭಾರತದಲ್ಲಿ ಹುಟ್ಟು ಸಾವುಗಳಿಗೇನೂ ಕೊರತೆಯಿಲ್ಲ. ಎಷ್ಟೋ ಜನ ಹುಟ್ಟುತ್ತಾರೆ, ಇನ್ನೆಷ್ಟೋ ಜನ ಸಾಯುತ್ತಲಿರುತ್ತಾರೆ. ಕೆಲವರು ಹುಟ್ಟಿದ್ದೂ ಗೊತ್ತಾಗುವುದಿಲ್ಲ ಸಾಯುವುದೂ ಗೊತ್ತಾಗುವುದಿಲ್ಲ. ಆದರೆ, ಕೆಲವರ ಸಾವು ಮಾತ್ರ ನಮ್ಮನ್ನು ಕಾಡುತ್ತಿರುತ್ತದೆ. ನಾವು ಎಷ್ಟೇ ಹೊಸ ವಿಷಯಗಳತ್ತ ವಾಲಿದರೂ ಅಂತಹ ಮನುಷ್ಯನಿಗೆ ಇಂಥ ಸಾವಾ? ಸ್ವತಃ ಯಮನಿಗೇ ಇವರನ್ನ ಕಂಡರೆ ಭಯವಿತ್ತೇನೋ ಎಂಬಂತೆ ಜೀವನ ಸಾಗಿಸುತ್ತಾರೆ. ಅಂಥವರಲ್ಲಿ ಒಬ್ಬ ನಟ ಬ್ರೂಸ್ ಲೀ. ಅಂಥ ಉಕ್ಕಿನ ಮನುಷ್ಯ ಏಕಾಏಕಿ ಸಾಯುತ್ತಾನೆ ಎಂದರೆ ಹೇಗೆ ಸಾಧ್ಯ? ಹೇಗೆ ನಂಬುವುದು? ಭಾರತದಲ್ಲೂ ಇಂಥದ್ದೊಂದು ಸಾವು ಸಂಭವಿಸಿದ್ದಾಗ ಇದೇ ಅನುಮಾನ ಆಘಾತ ನಮಗಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಪರಾಕ್ರಮಿ ಮಾಯವಾಗುತ್ತಾನೆ ಎಂದರೆ ಏನರ್ಥ? ಒಬ್ಬನನ್ನು ಸಾಯಿಸುವುದು ಅಷ್ಟು ಸುಲಭವಾ? ಒಬ್ಬ ಪರಾಕ್ರಮಿ ಸುಮ್ಮನೆ ಓಡಿ ಹೋದರಾ? ಇಂಥ ಎಷ್ಟೋ ಅನುಮಾನಗಳು, ಪ್ರಶ್ನೆಗಳು ನಮ್ಮನ್ನು ಕಾಡುವುದು ದೇಶಭಕ್ತರೊಬ್ಬರ ಅಕಾಲಿಕ ಸಾವಿನಿಂದ. ಇಲ್ಲ, ಅವರ ಸಾವಿನ ಬಗ್ಗೆಯೂ ಗೊತ್ತಿಲ್ಲದಿರುವುದರಿಂದ. ನೇತಾಜಿ ಸುಭಾಷ್ ಚಂದ್ರ ಬೋಸ್.

ಬ್ರಿಟಿಷರಿಂದ ಹಿಡಿದು ನೆಹರೂವರೆಗೂ ಈ ಹೆಸರು ಕೇಳಿದರೆ ಸಾಕು ಮೈ ನಡುಗುತ್ತಿತ್ತು. ಇಬ್ಬರಿಗೂ ಅದೇ ಭಯ. ಎಲ್ಲಿ ನಮ್ಮ ಅಸ್ತಿತ್ವಕ್ಕೆ ಅಥವಾ ಆಧಿಪತ್ಯಕ್ಕೆ ತೊಂದರೆಯುಂಟಾಗುವುದೋ ಎಂದು. ಬ್ರಿಟಿಷರು ದೇಶ ಬಿಟ್ಟು ಹೋಗಲು ಕಾರಣರಾದ ಬೋಸ್‍ಗೆ ಹೂವಿನ ಹಾರ ಹಾಕಿ ಬರಮಾಡಿಕೊಳ್ಳಬೇಕಿತ್ತು. ಆದರೆ, ದೇಶಭಕ್ತನೊಬ್ಬ ಎಲ್ಲಿ ಹೋದನೆಂದೇ ತಿಳಿಯದ ಪರಿಸ್ಥಿತಿಗೆ ಸಿಲುಕಿ, ಕೊನೆಗೆ ಅವರು ಯಾವುದೋ ವಿಮಾನ ಅಪಘಾತದಲ್ಲಿ ಸತ್ತರು ಎಂದು ಅಧಿಕಾರ ದಾಹಿ ನೆಹರೂ ಹೇಳಿದ ಮಾತನ್ನು ನಂಬಿ ಕುಳಿತೆವಲ್ಲ? ನಮಗೇನಾಗಿದೆ? ನೇತಾಜಿ ಭಾರತದಲ್ಲಿದ್ದು ಮೊದಲ ಪ್ರಧಾನಿಯೋ ಅಥವಾ ರಕ್ಷಣಾ ಸಚಿವರೋ ಆಗಿದ್ದರೆ, ದೇಶ ಇನ್ನು ಎಷ್ಟೋ ಎತ್ತರಕ್ಕೆ ಬೆಳೆದುಬಿಡುತ್ತಿತ್ತು. ಹಳೆಯ ಕೇಂದ್ರ ಸರ್ಕಾರದ ದಾಖಲೆಯ ಪ್ರಕಾರ ಆವರು ಪ್ರಾಣ ಬಿಟ್ಟಿದ್ದು ಆಗಸ್ಟ್ 18 1945. ಸುಮಾರು 71 ವರ್ಷವಾಗುತ್ತಾ ಬಂದರೂ ನೆನಪು ಮಾತ್ರ ಇನ್ನೂ ಮಾಸಿಲ್ಲ.

1955ರ ಫೆಬ್ರವರಿಯಲ್ಲಿ ಬಿಬಿಸಿಯಲ್ಲಿ ನಡೆದ ಸಂದರ್ಶನದ ವೇಳೆ ನಿರೂಪಕ ಫ್ರಾನ್ಸಿಸ್ ವಾಟ್ಸನ್, ಬ್ರಿಟಿಷರು ಭಾರತವನ್ನೇಕೆ ಬಿಟ್ಟು ಹೋದರು ಎಂಬ ಪ್ರಶ್ನೆಗೆ ಅಂಬೇಡ್ಕರ್ ಖಡಕ್ಕಾಗಿ ಒಂದು ಉತ್ತರ ನೀಡಿದ್ದರು. “ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣ ಬೋಸ್ ಹೊರತು ಗಾಂಧಿಯಲ್ಲ. ಎಲ್ಲಿ ನೇತಾಜಿಯ ಸೈನ್ಯ ಮತ್ತೆ ತಮ್ಮನ್ನು ನುಂಗಿಬಿಡುವುದೋ ಎಂದು ಹೆದರಿ, ಬಿಟ್ಟು ಹೋದರು” ಎಂದಿದ್ದರು. ನಾವು ಇಲ್ಲಿ ಕುತೂಹಲಕಾರಿ ವಿಷಯವೊಂದನ್ನು ಕಾಣಬಹುದು. ಅಂಬೇಡ್ಕರ್‍ಗೂ ನೇತಾಜಿಯ ಬಗ್ಗೆ ಸತ್ಯ ಗೊತ್ತಿತ್ತು. ಅವರು ಕಾಣೆಯಾದಾಗಲೂ ಇದರ ಹಿಂದೆ ನೆಹರೂರ ಕೈವಾಡವಿದೆ ಎಂದು ಗೊತ್ತಿತ್ತು. ಇದೇ ಕಾರಣಕ್ಕೋ ಏನೋ, ಅಂಬೇಡ್ಕರ್ ಯಾವಾಗಲೂ “ಕಾಂಗ್ರೆಸ್‍ಗೆ ಸೇರಿಕೊಳ್ಳುವುದು ಆತ್ಮಹತ್ಯೆ ಮಾಡಿಕೊಂಡ ಹಾಗೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ” ಎನ್ನುತ್ತಿದ್ದದ್ದು. ಯೋಚಿಸಿ, ಸ್ವಾತಂತ್ರ್ಯ ತಂದು ಕೊಟ್ಟೆವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್‍ಗೆ ಮುನಿಸೇಕೆ? ಆದರೀಗ, ಇದೇ ಕಾಂಗ್ರೆಸ್ ಅದೇ ಅಂಬೇಡ್ಕರ್ ಹೆಸರು ಹೇಳಿಕೊಂಡು ತಾವು ದಲಿತಪರ ಎನ್ನುತ್ತಿದೆ. ಇನ್ನು, ಅಂಬೇಡ್ಕರ್ ಗಾಂಧೀಜಿಯ ಬಗ್ಗೆ ಮಾತನಾಡಿದ ಮಾತ್ರಕ್ಕೆ ಗಾಂಧೀಜಿ ಏನೂ ಮಾಡಿಲ್ಲ ಎಂದಲ್ಲ. ಆದರೆ, ಸ್ವಾತಂತ್ರ್ಯ ಸಿಕ್ಕಿದ್ದೇ ಗಾಂಧೀಜಿಯ “ಭಾರತ ಬಿಟ್ಟು ತೊಲಗಿ” ಚಳವಳಿಯಿಂದ ಎನ್ನಲು ಸಾಧ್ಯವಿಲ್ಲ. ಕಾರಣ, ನೇತಾಜಿಯೇನು ಕಡಿಮೆ ಇರಲಿಲ್ಲ. ಗಾಂಧೀಜಿ ತಮ್ಮ ಸತ್ಯಾಗ್ರಹ ಶುರು ಮಾಡುವುದಕ್ಕಿಂತ ಮೊದಲೇ ನೇತಾಜಿ ಹೆಸರುವಾಸಿಯಾಗಿ ತಮ್ಮ ಸೈನ್ಯದ ಮೂಲಕ ಬ್ರಿಟಿಷರಿಗೆ ತಲೆಬಿಸಿಯಾಗಿದ್ದರು. ಇನ್ನೇನು ಅವರು ನೇತಾಜಿಯ ಹೋರಾಟ ತಡೆಯಲಾಗದೇ ಹೊರ ಹೋಗುವ ಆಲೋಚನೆ ಮಾಡುವಾಗಲೇ ಗಾಂಧೀಜಿ, ಸತ್ಯಾಗ್ರಹ ಶುರು ಮಾಡಿದ್ದು. ಬ್ರಿಟಿಷರಿಗೆ ಭಯ ಇದ್ದಿದ್ದು ಒಂದೇ. ಎಲ್ಲಿ ಮತ್ತೊಮ್ಮೆ 1857ರ ಸಿಪಾಯಿ ದಂಗೆಯ ರೀತಿಯಲ್ಲಿ ಈಗ ಇನ್ನೇನಾದರೂ ನೇತಾಜಿ ಶುರು ಮಾಡುತ್ತಾರೋ ಎಂದು.

ಈ ಬಾರಿ ಅಂಥದ್ದೇನಾದರೂ ಆದರೆ ನಮ್ಮ ದೇಶವನ್ನೂ ನೋಡದೇ, ಭಾರತದಲ್ಲೇ ಸಾಯಬೇಕಾಗುತ್ತದೆ ಎಂಬ ಸ್ಪಷ್ಟ ಅರಿವಿತ್ತು ಬ್ರಿಟಿಷರಿಗೆ. ಇದು ನಾನು ಹೇಳುತ್ತಿರುವ ಅಭಿಪ್ರಾಯವಲ್ಲ, ಬದಲಿಗೆ ಬ್ರಿಟಿಷ್ ಅರ್ಕೈವ್‍ನಲ್ಲಿ ಇದ್ದಂಥ ದಾಖಲೆಗಳು ಹೇಳುತ್ತಿವೆ. ನಮಗೆ ಇದರಲ್ಲೇ ತಿಳಿಯಬೇಕು ನೇತಾಜಿಯ ತಾಕತ್ತು ಎಂಥದ್ದು ಎಂದು. ಇಂಥ ಒಬ್ಬ ಧೀರ, ನಮ್ಮನ್ನು ಬಿಟ್ಟು ಹೋದಾಗ ನಾವೇಕೆ ಸುಮ್ಮನೆ ಕುಳಿತಿದ್ದೆವು? ಸುಭಾಷ್ ಚಂದ್ರ ಬೋಸರ ಪರಾಕ್ರಮ ಮತ್ತು ಬುದ್ಧಿಮತ್ತೆಯ ಬಗ್ಗೆ ಅರಿವಿರುವ ಯಾವನೂ ಬೋಸ್ ಏಕಾಏಕಿ ಮಾಯವಾದರು ಅಥವಾ 1945ರಲ್ಲೇ ಸತ್ತರು ಎಂದು ನಂಬುವುದಿಲ್ಲ. ಅಷ್ಟೇ ಏಕೆ ಸ್ವತಃ ಬ್ರಿಟಿಷ್ ಗುಪ್ತಚರ ಸಂಸ್ಥೆ ಹಾಗೂ ಮಹಾತ್ಮಾ ಗಾಂಧೀಜಿಯೇ “ಇಲ್ಲ ಬೋಸ್ ಸತ್ತಿಲ್ಲ” ಎನ್ನುತ್ತಿದ್ದರು. ಅದು ಏಕೆಂದು ಮುಂದೆ ತಿಳಿಸುತ್ತೇನೆ. ನೀವೇ ಆಲೋಚನೆ ಮಾಡಿ, ಒಬ್ಬ ಒಂದು ದೊಡ್ಡ ಹೋರಾಟ ಮಾಡುತ್ತಿರುವವನು ಗೆಲುವಿನ ಹಂತದಲ್ಲಿರುವಾಗ ಅಥವಾ ಅತೀವ ಜನ ಬೆಂಬಲವನ್ನು ಹೊಂದಿರುವಾಗ ಯಾರಿಗೂ ಹೇಳದೇ ಮಾಯವಾಗುತ್ತಾನೆ ಅಥವಾ ಆತನ ಸಾವಿನ ಸುದ್ದಿಯನ್ನು ಇನ್ಯಾರೋ ಒಬ್ಬ ನಮಗೆ ಹೇಳುತ್ತಾನೆ ಎಂದರೆ ಏನರ್ಥ? ಸುಭಾಷ್ ಚಂದ್ರ ಬೋಸ್ ಕಾಣೆಯಾದಾಗ ಸ್ವಲ್ಪವೂ ತಲೆ ಕೆಡಿಸಿಕೊಳ್ಳದ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಬಗ್ಗೆ ಅನುಮಾನ ಬರದೇ ಇರಲು ಸಾಧ್ಯವೇ? ಏಕೆಂದರೆ ಕಾಣಿಸದಿದ್ದಾಗ ತಲೆಬಿಸಿ ಮಾಡಿಕೊಳ್ಳದಿರಲು ಕಳೆದುಹೋಗಿದ್ದು ಯಾವುದೋ ಬೆಕ್ಕಲ್ಲ. ಒಬ್ಬ ಅಪ್ರತಿಮ ದೇಶ ಭಕ್ತ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವ. ಯೆಸ್, ಇಲ್ಲಿಂದಲೇ ನೆಹರೂ ಮೇಲೆ ಅನುಮಾನ ಶುರುವಾಗುವುದು.

ಸುಭಾಷ್ ಚಂದ್ರ ಬೋಸ್ ಜಪಾನ್‍ಗೆ ತೆರಳುವಾಗ ತೈಹೋಕುವಿನ ಬಳಿ ವಿಮಾನ ಅಪಘಾತದಲ್ಲಿ ಮೃತಪಟ್ಟರು ಎಂದೆಲ್ಲ ನಮ್ಮ ಇತಿಹಾಸ ಪುಸ್ತಕದಲ್ಲಿ ಓದಿದ ನೆನಪಿರಬಹುದು. ಹಾಗಾದರೆ, ಇಷ್ಟು ದಿನ ನಾವು ಡಿಸ್ಟಾರ್ಟೆಡ್ ಇತಿಹಾಸವನ್ನು ಓದಿದ್ದೇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೇಗೆ ಇದೆಲ್ಲ ಕಾಂಗ್ರೆಸ್ ಮತ್ತು ನೆಹರೂರ ಕಟ್ಟುಕತೆ ಎನ್ನುವುದಕ್ಕೆ ಉದಾಹರಣೆ ಕೊಡುತ್ತೇನೆ ಕೇಳಿ. ನ್ಯಾಷನಲ್ ಆರ್ಕೈವ್ ಆಫ್ ಆಸ್ಟ್ರೇಲಿಯಾದಲ್ಲಿ ನೇತಾಜಿ ಸಾವಿನ ರಹಸ್ಯದ ಕೆಲ ದಾಖಲೆಗಳಿತ್ತು. ಅದರಂತೆ ಆಗಸ್ಟ್ 18, 1945 ವಿಮಾನ ಅಪಘಾತದಲ್ಲಿ ಸತ್ತಿರಲಿಲ್ಲ. ಇನ್ನು ಅಚ್ಚರಿಯ ವಿಷಯವೆಂದರೆ ಅಂದು ವಿಮಾನ ಅಪಘಾತವೇ ಆಗಿರಲಿಲ್ಲ. ಇದನ್ನು ತೈವಾನ್ ಸರಕಾರವೇ ಸ್ಪಷ್ಟಪಡಿಸಿದೆ. ಆಗಸ್ಟ್ 14ರಿಂದ ಅಕ್ಟೋಬರ್ 25 1945ರವರೆಗೂ ಯಾವುದೇ ರೀತಿಯ ವಿಮಾನ ಅಪಘಾತಗಳಾಗಿಲ್ಲ ಎಂದು ತೈವಾನ್‍ನ ಸಾರಿಗೆ ಮತ್ತು ಸಂಪರ್ಕ ಸಚಿವ ಲಿನ್ ಲಿಂಗ್-ಸ್ಯಾನ್ ಇಮೇಲ್ ಮೂಲಕ ಕೆಲವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಸ್ಟಿಸ್ ಎಮ್.ಕೆ. ಮುಖರ್ಜಿ, ಭಾರತೀಯ ಮಾಧ್ಯಮಗಳಿಗೆ ತಿಳಿಸಿದರು. ಅಪಘಾತವೇ ಆಗದಿರುವಾಗ, “ಅಪಘಾತದಲ್ಲಿ ಸತ್ತರು” ಎಂದು ಕತೆ ಕಟ್ಟುವ ನೆಹರೂ ಎಂಥ ದ್ರೋಹಿ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ಸರಿ, ವಾದಕ್ಕಾಗಿ ತೈವಾನ್ ಸರಕಾರವೇ ಸರಿ ಇಲ್ಲ, ಸುಳ್ಳು ಹೇಳಿದೆ ಎಂದೇ ಇಟ್ಟುಕೊಳ್ಳೋಣ. ಆದರೆ, ಖೋಸ್ಲಾ ಕಮಿಷನ್‍ನ ವಿಚಾರಣೆ ವೇಳೆ, ಸ್ವತಃ ನೇತಾಜಿ ಜೊತೆ ವಿಮಾನ ನಿಲ್ದಾಣದಲ್ಲಿ ಜೊತೆಗಿದ್ದ ದೇವ್‍ನಾಥ್ ದಾಸ್‍ರನ್ನು ಪ್ರಶ್ನಿಸಲಾಯಿತು. ಸೋ ಕಾಲ್ಡ್ ಅಪಘಾತವಾದಾಗ ಕೊನೆಯದಾಗಿ ನೇತಾಜಿಯನ್ನ ನೋಡಿದ್ದ ದೇವ್‍ನಾಥ್ ದಾಸ್, ಬೋಸ್ 1945ರ ಆಗಸ್ಟ್ 17ಕ್ಕೇ ನನ್ನನ್ನು ಕರೆದು ನಮ್ಮ ಪ್ಲಾನ್ ಬದಲಾಗಿದೆ ಎಂದು ಹೇಳಿದ್ದರು ಎಂದಿದ್ದರು. ಅದರಂತೆ ಸೈಗಾನ್‍ನಿಂದ ಹೊರಡಬೇಕಾಗಿದ್ದ ನೇತಾಜಿ ಹೊರಡಲಿಲ್ಲ.

ಕೆಲ ದಿನಗಳ ಬಳಿಕ ಅವರು ಜಪಾನ್‍ನ ಮಂಚುರಿಯನ್‍ಗೆ ಬಂದು ಅಲ್ಲಿಂದ ಸೋವಿಯತ್ ಯುನಿಯನ್‍ಗೆ(ರಷ್ಯಾ) ರಹಸ್ಯವಾಗಿ ಪ್ರವೇಶಿಸಿದ್ದರು. ನೆಹರೂ ಹೇಳಿದಂತೆ ನೇತಾಜಿ, ವಿಮಾನ ಪ್ರಯಾಣ ಮಾಡಿದ್ದರೂ ಆಗಸ್ಟ್ 18ಕ್ಕೆ ಮಾಡಲಿಲ್ಲ. ಇದೂ ಸಹ ನೆಹರೂ ನೀಚ ಬುದ್ಧಿಗೆ ಹಿಡಿದ ಕನ್ನಡಿ. ಸುಭಾಷ್ ಚಂದ್ರ ಬೋಸ್‍ರನ್ನು ಮುಗಿಸಲು ಕಾಣದ ‘ಕೈ’ಗಳು ಬಹಳ ಕೆಲಸ ಮಾಡುತ್ತಿತ್ತು ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷಿಗಳು ಬೇಕು? ಇನ್ನು ಹೇಗಿದ್ದರೂ ನೇತಾಜಿ ಜಪಾನ್‍ಗೆ ಬರಲೇ ಬೇಕು ಎಂದು ತಿಳಿದಿದ್ದ ನೆಹರೂ, ಸುಭಾಷ್ ಚಂದ್ರ ಬೋಸ್‍ರನ್ನು ಅಲ್ಲಿರುವ ತಮ್ಮ ಜಪಾನಿ ಚೇಲಾಗಳ ಮೂಲಕ ಟೋಕಿಯೋಗೆ ಬರುವಂತೆ ಮಾಡಲು ಬಹಳ ಸರ್ಕಸ್ ಮಾಡಿದರು. ಒಮ್ಮೆ ಟೋಕಿಯೋಗೆ ಹೋಗಿದ್ದರೆ ನೇತಾಜಿಯ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟಕ್ಕೂ ನೆಹರೂಗೆ ನೇತಾಜಿಯ ಮೇಲೆ ಏಕಿಷ್ಟು ಕೋಪ ಎಂದೆನಿಸಬಹುದು. ಅದಕ್ಕೂ ಉತ್ತರವಿದೆ. ಸ್ವಾತಂತ್ರ್ಯ ಚಳವಳಿಯ ವೇಳೆ ನಯಾ ಪೈಸೆ ಕೆಲಸ ಮಾಡದಿದ್ದರೂ ಸ್ವತಂತ್ರ್ಯ ಬಂದಾಗ ದೇಶಕ್ಕೆ ತಾನೇ ಪ್ರಧಾನಿಯಾಗಬೇಕೆಂಬ ಬಿಟ್ಟಿ ಆಸೆಗಳು ನೆಹರೂಗೆ ಬಹಳವೇ ಇತ್ತು. ನೆಹರೂ ವ್ಯಕ್ತಿತ್ವ ಹೇಗೆಂದರೆ, ತನ್ನ ಕುರ್ಚಿಗೆ ಕುತ್ತು ಬರುತ್ತದೆಯೆಂಬ ವಾಸನೆ ಸಿಕ್ಕರೂ ಸಾಕು, ಏನು ಮಾಡುವುದಕ್ಕೂ ಕ್ಯಾರೇ ಎನ್ನುತ್ತಿರಲಿಲ್ಲ. ಇಂಥ ಸ್ಥಿತಿಯಿರುವಾಗ ತನ್ನ ದಿಟ್ಟತನದಿಂದ ಹೆಸರುವಾಸಿಯಾಗಿದ್ದ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸುಭಾಷ್ ಚಂದ್ರ ಬೋಸ್ ಮತ್ತು ಸೈನ್ಯ ಇನ್ನೇನು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಕೊನೆಯ ಹಂತದ ಹೋರಾಟ ಮತ್ತು ಅದಕ್ಕೆ ಪ್ಲಾನ್ ಮಾಡುತ್ತಿದ್ದರು. ಎಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಜನರು ನೇತಾಜಿಯನ್ನೇ ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತಾರೋ ಎಂಬ ಭಯವಿತ್ತು ನೆಹರೂಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದರಂತೆ ಇದ್ಯಾವುದರ ಸಹವಾಸವೇ ಬೇಡವೆಂದು ನೆಹರೂ, ಯಾವುದೇ ತನಿಖೆಯಾಗದೇ ವಿಮಾನ ಅಪಘಾತದಲ್ಲಿ ನೇತಾಜಿ ಮೃತ ಪಟ್ಟರು ಎಂದು ಗುಲ್ಲೆಬ್ಬಿಸಿದರು. ದೇಶದ ಪ್ರಧಾನಿಯೊಬ್ಬ ತನಿಖೆಗಳ ನಿಖರ ವರದಿಯಿಲ್ಲದೇ ಯಾವನದ್ದೋ ಕಟ್ಟೆ ಪುರಾಣ ನಂಬಿ ಹೇಳಿಕೆ ನೀಡಿದ್ದನ್ನು ನೋಡಿದ್ದೀರಾ? ಈ ನೆಹರೂಗೆ ತಾನು ಪ್ರಧಾನಿಯೆಂಬುದೇ ಮರೆತು ಹೋಗಿತ್ತಾ ಅಥವಾ ಪ್ರಧಾನಿಯ ಜವಾಬ್ದಾರಿಗಳ ಬಗ್ಗೆ ಅರಿವೇ ಇರಲಿಲ್ಲವೋ? ಬಹುಶಃ ಭಾರತದ ರಾಜಕಾರಣ ಇಷ್ಟು ಕೆಳ ಮಟ್ಟಕ್ಕೆ ಬರಲು ನೆಹರೂ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ, ರಾಜಕಾರಣದ ಆರಂಭವೇ ಸರಿಯಿರಲಿಲ್ಲ.

ಮುಂದುವರಿಯುವುದು……………

2 thoughts on “ಸತ್ತಿದ್ದು ನೇತಾಜಿಯಲ್ಲ, ನೆಹರೂ! Part 1 

Leave a Reply

Copyright©2021 Chiranjeevi Bhat All Rights Reserved.
Powered by Dhyeya