ರೂಪಿಣಿಯಿಂದ ಗುಮಿಗುಮಿ ಒದೆಸಿಕೊಂಡವನಿಂದ ಏನನ್ನು ನಿರೀಕ್ಷಿಸುವುದು?

ಬಹುಶಃ ರವಿ ಬೆಳಗೆರೆಗೆ, ವಿಶ್ವೇಶ್ವರ ಭಟ್ಟರನ್ನು ಕೆದಕದೇ ಸುಮ್ಮನೇ ಕೂರಲಿಕ್ಕೇ ಬರುವುದಿಲ್ಲವೇನೋ. ಹೀಗೆನಿಸಿದ್ದು ಬೆಳಗೆರೆಯ ಅದೇ ಬ್ಲಾಕ್ ಅಂಡ್ ವೈಟ್ ಪತ್ರಿಕೆಯಲ್ಲಿ ಮತ್ತದೇ ವಿಶ್ವೇಶ್ವರ ಭಟ್ಟರ ಬಗ್ಗೆ ಗೀಚಿದ್ದನ್ನು ನೋಡಿದಾಗ. ಅದೂ ಒಂದರ ಮೇಲೊಂದು ಸುಳ್ಳು. ಸತ್ಯಕ್ಕೆ ತನ್ನ ಪಾವಿತ್ರತೆಯ ಮೇಲೇ ಅನುಮಾನ ಬರುವಂತೆ ಬರೆದಿದ್ದರು ರವಿ ಬೆಳಗೆರೆ. ನನಗೆ ರಿವಿ ಬೆಳಗೆರೆಯ ಬಗ್ಗೆ ಬರೆಯಲು ನಿಜಕ್ಕೂ ಅಸಹ್ಯ ಮೂಡುತ್ತದೆ. ಫೇಸ್ಬುಕ್ಕಿನಲ್ಲಿ ರವಿ ಬೆಳಗೆರೆಯ ಬಗ್ಗೆ ಬರೆಯತ್ತೇನೆ ಎಂದು ಹಾಕಿದಾಗ 10ರಲ್ಲಿ 6 ಜನ ರವಿ ಬೆಳಗೆರೆ ಹಣೆಬರಹ ನಮಗೆ ಗೊತ್ತು. ಅವನ ಬಗ್ಗೆ ಬರೆದು ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ ಸಾರ್ ಎಂದರು. ಇನ್ನುಳಿದವರು ಬರೆಯಿರಿ ಸಾರ್. ಅವನ ಜಾತಕವನ್ನು ಹೊರತೆಗೆಯಿರಿ ಎಂದರು. ಹೌದು. ಪತ್ರಿಕೋದ್ಯಮದಲ್ಲಿದ್ದರೆ ಏನು ಬೇಕಾದರೂ ಬರೆದು ಜೀರ್ಣಿಸಿಕೊಳ್ಳಬಲ್ಲೆ ಎಂದು ತಿಳಿದಿರುವ ಬೆಳಗೆರೆಯ ಅಹಂ ಇಳಿಸಬೇಕಿದೆ. ತಾನು ಬರೆದಿದ್ದಷ್ಟೇ ಸತ್ಯ. ಇನ್ನೊಬ್ಬರು ಬರೆದಿದ್ದೆಲ್ಲ ಬರೀ ಓಳು ಎಂಬ ಅವರ ಧಿಮಾಕಿಗೆ ಉತ್ತರ ಕೊಡಬೇಕಿದೆ. ಇನ್ನು ವಿಶ್ವೇಶ್ವರ ಭಟ್ಟರ ಬಗ್ಗೆ ಮತ್ತು ಇನ್ನಿತರರ ಬಗ್ಗೆ ಈತ ಹಾಯ್ ಬೆಂಗಳೂರ್ ಪತ್ರಿಕೆ ಶುರುವದಾಗಿನಿಂದಲೂ ಸುಳ್ಳು ಬರೆಯುತ್ತಿದ್ದರು ಎಂಬುದನ್ನು ಸಾಕ್ಷಿ ಸಮೇತ ಜನರ ಮುಂದಿಡಬೇಕೆಂದು ಹಲವಾರು ಜನರನ್ನು ಸಂದರ್ಶಿಸಿ, ಇಷ್ಟವಿಲ್ಲದಿದ್ದರೂ ಬೆಳಗೆರೆಯ ಬಗ್ಗೆ ಬರೆಯುತ್ತಿದ್ದೇನೆ. I am sorry ಓದುಗರೇ.. Just bare with me. ರವಿ ಬೆಳಗೆರೆಯದ್ದು ಒಂದು ರೀತಿಯ ಗಾಬೆಲ್ಸ್ ತತ್ವ. ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಅದನ್ನೇ ಸತ್ಯವನ್ನಾಗಿ ಪರಿವರ್ತಿಸುವುದು. ಇದಕ್ಕೆ ಒಂದು ತಾಜಾ ಉದಾರಣೆ ಕೊಡುತ್ತೇನೆ ಕೇಳಿ. ಬಹುಶಃ ಈ ಉದಾಹರಣೆ ಸಾಮಾನ್ಯ ಓದುಗರಿಗೆ ಅಚ್ಚರಿ ಮೂಡಿಸುತ್ತದೆ.
If I’m not wrong, 1996-97 ರಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ನಟಿ ರೂಪಿಣಿಯ ಬಗ್ಗೆ ಒಂದು ಲೇಖನ ಪ್ರಕಟವಾಯಿತು. ಅದರಲ್ಲಿ ನಟಿ ರೂಪಿಣಿ ಏಡ್ಸ್ನಿಂದ ಸತ್ತಳು ಎಂದು ರವಿ ಬೆರೆದಿದ್ದರು. ಆದರೆ, ಅವಳು ಇನ್ನೂ ಸತ್ತೇ ಇರಲಿಲ್ಲ.. In fact, ಇವತ್ತಿಗೂ ಆರೋಗ್ಯವಂತಳಾಗಿಯೇ… ಜೀವಂತವಾಗಿದ್ದಾಳೆ. ಕಣ್ಣು ಮುಂದೆ ಓಡಾಡಿಕೊಂಡಿರುವ ಒಬ್ಬ ವ್ಯಕ್ತಿಯ ಬಗ್ಗೆ ಅಸಹ್ಯವಾಗಿ ಬರೆದು, ಆವರು ಸತ್ತು ಹೋಗಿದ್ದಾರೆ ಎಂದು ಬರೆದಿದ್ದಾರೆಂದರೆ ಬೆಳಗೆರೆ ಯಾವ ಸೀಮೆಯ ಪತ್ರಕರ್ತ ಎಂದು ನೀವೇ ಆಲೋಚಿಸಿ. ಒಂದು ಹೆಣ್ಣಿಗೆ ಮರ್ಯಾದೆ ಕೊಡದೇ ಮಾತಾಡುವುದೇ ಅಪರಾಧ. ಹೀಗಿರುವಾಗ ಬದುಕಿರುವ ಹೆಣ್ಣು ಮಗಳಿಗೆ ಏಡ್ಸ್ ಬಂದು ಸತ್ತಿದ್ದಾಳೆ ಎಂದರೆ ಬೆಳಗೆರೆಯ ಕೊಳಕು ಮನಸ್ಥಿತಿ ಅರ್ಥವಾಗುತ್ತದೆ. ಯಾವ್ ಮೂಡ್ನಲ್ಲಿ ರವಿ ಬೆಳಗೆರೆ ಹಾಗೆ ಬರೆದಿದ್ದರೋ ಗೊತ್ತಿಲ್ಲ. ರೂಪಿಣಿ ಇನ್ನೂ ಬದುಕಿದ್ದಾಳೆ ಎಂದು ತಿಳಿದಾಗ ಎಚ್ಚೆತ್ತುಕೊಂಡ ರವಿ ಬೆಳಗೆರೆ. ಆಕೆಯ ಮನೆಗೇ ಹೋಗಿ, ಸಂರ್ದಶನ ಮಾಡಿ ಬಂದು, “ನಾನು ನೋಡಿ ಬಂದ ರೂಪಿಣಿ” ಎಂಬ ಲೇಖನ ಬರೆದರು. ಹೌದು ನಾನು ಮಾಡಿದ್ದು ತಪ್ಪಾಯಿತು ಎಂದು ಒಪ್ಪಿಕೊಂಡರು. ಯಾವುದಾದರೂ ವಸ್ತುವಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದಿದ್ದರೆ, ತಯಾರಕರರು ಕೃತಕ ಬೇಡಿಕೆ ಹುಟ್ಟು ಹಾಕುತ್ತಾರೆ. ಇದಕ್ಕೆ ವಾಣಿಜ್ಯದ ಭಾಷೆಯಲ್ಲಿ “Artificial Demand” ಎಂದು ಕರೆಯುತ್ತಾರೆ. ರವಿ ಬೆಳಗೆರೆ ಮಾಡಿರುವ ಗೋಲ್ಗಪ್ಪಾ ಉಣ್ಣುವ ಕೆಲಸಕ್ಕೆ ಜನರು ರೊಚ್ಚಿಗೆದ್ದಿದ್ದರು.. ಆಗ ಬೆಳಗೆರೆ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ “ರವಿ ಬೆಳಗೆರೆ ಒಬ್ಬ ಅಚ್ಛಾ ಪತ್ರಕರ್ತ… ತಪ್ಪು ಮಾಡಿದ್ದನ್ನು ಒಪ್ಪಿಕೊಂಡು ದೊಡ್ಡವರಾಗಿದ್ದಾರೆ”, “ನಾನು ಇನ್ನು ಬೆಳಗೆರೆಯ ಅಭಿಮಾನಿಯಾದೆ” ಎಂದೆಲ್ಲ ತನ್ನ ಬಗ್ಗೆ ತಾನೇ ಬರೆದುಕೊಂಡು, ಓದುಗರು ನನಗೆ ಇದೆಲ್ಲ ಪತ್ರದ ಮೂಲಕ ಹೇಳಿದ್ದಾರೆ ಎಂದೆಲ್ಲ ಕಾಗೆ ಹಾರಿಸಿ ಬಿಟ್ಟರು. ಆದರೆ ಇವರು ಹಾರಿಸಿದ್ದು ಪಾರಿವಾಳಲ್ಲ, ಕಾಗೆ ಎಂದು ತಿಳಿಯಲು ಬಹಳಷ್ಟು ದಿನ ಬೇಕಿರಲ್ಲಿಲ್ಲ. ಇಲ್ಲಿ ಕಹಾನಿ ಮೇ ಟ್ವಿಸ್ಟ್ ಇದೆ ನೋಡಿ. ಇವರು ಈಗ ಲಂಕೇಶ್ ಹಾಗಿದ್ದರು, ಹೀಗಿದ್ದರು ಎಂದು ಏನು ಪಿ. ಲಂಕೇಶ್ರನ್ನು ಹೊಗಳುತ್ತಿದ್ದಾರೋ, ಅದೇ ಲಂಕೇಶ್, ರವಿ ಬೆಳಗೆರೆಯನ್ನು ಬಟಾಬಯಲು ಮಾಡಿದ್ದರು. ರವಿ ಬೆಳಗೆರೆ, ರೂಪಿಣಿ ಸಂದರ್ಶನಕ್ಕೆ ಹೋಗಿದ್ದು ರಂಗನಾಥ್ ಎಂಬ ವೇಷ ಧರಿಸಿ. ಇಲ್ಲದಿದ್ದರೆ ರೂಪಿಣಿ ಬೆಳಗೆರೆಗೆ ಉಗಿದು ಓಡಿಸುತ್ತಿದ್ದರು ಎಂದು ಬರೆದರು. ಅಲ್ಲಿ ಆಗಿದ್ದಿಷ್ಟೇ… ಅಂಡು ಸುಟ್ಟ ಬೆಕ್ಕಿನ ಹಾಗೆ ಆಗಿದ್ದ ಬೆಳಗೆರೆ ರೂಪಿಣಿ ಮನೆಗೆ ಹೋಗುವುದರ ಬಗ್ಗೆ ಆಲೋಚಿಸಿದರು.
ಆದರೆ, ಇಲ್ಲೊಂದು ಸಮಸ್ಯೆ ಇತ್ತು. ನಾನು ರವಿ ಬೆಳಗೆರೆ ಎಂದುಕೊಂಡು ಹೋದರೆ ಒದೆಗಳು ಬೀಳುವುದು ಖಾತ್ರಿ ಎಂದು ಬೆಳಗೆರೆಗೆ ತಿಳಿದಿತ್ತು. ಹೀಗಾಗಿ ಚಿತ್ರಲೋಕ ವೀರೇಶ್ರನ್ನು ಜೊತೆಗೆ ಸೇರಿಸಿಕೊಂಡು, ತಾನು Indian Express ರಂಗನಾಥ್ ಎಂದು ಹೆಸರು ಬದಲಾಯಿಸಿಕೊಂಡು “ಸತ್ತ” ರೂಪಿಣಿ ಮನೆಗೆ ಹೋಗಿದ್ದರು ರವಿ ಬೆಳಗೆರೆ. ಅಸಲಿಗೆ ಈ ರಂಗನಾಥ್ ಎನ್ನುವ ಹೆಸರು ಬೇರೆ ಯಾರದ್ದೂ ಅಲ್ಲ, ಆಗ ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಎಚ್.ಆರ್. ರಂಗನಾಥ್ ಅಲಿಯಾಸ್ ಪಬ್ಲಿಕ್ ಟೀವಿ ರಂಗಣ್ಣ. ಆಗ ಜನರು ರಂಗನಾಥ್ರ ಹೆಸರು ಕೇಳಿದ್ದರು. ಮುಖ ಪರಿಚೆಯವಿರಲಿಲ್ಲ. ಇನ್ನು ರವಿ ಬೆಳಗೆರೆ ಯಾರೆಂದು ಅವರ ಹೆತ್ತವರಿಗಷ್ಟೇ ಗೊತ್ತಿತ್ತು. ಪಾಪ ರೂಪಿಣಿ, ರವಿಯನ್ನೇ Indian Express ರಂಗನಾಥ ಎಂದು ನಂಬಿ ಕಾಫಿ ಕೊಟ್ಟು ಅದ್ಯಾರೋ ರವಿ ಬೆಳಗೆರೆ ಎಂಬ ಹೆಸರಿಲ್ಲದ ಪತ್ರಕರ್ತ ನನ್ನ ಬಗ್ಗೆ ಗೀಚಿಕೊಂಡಿದ್ದಾನೆ ಎಂದು ಸಖತ್ತಾಗಿಯೇ ಬೈದಿದ್ದಾಳೆ. ಸಂದರ್ಶನ ಮುಗಿಸಿ ಬಂದ ಬೆಳಗೆರೆ “ಅಯ್ಯೋ, ನಾನು ರವಿ ಬೆಳಗೆರೆ ಎಂದು ಗೊತ್ತಾದ ಮೇಲೂ ಆಕೆ ನನ್ನನ್ನು ಅಣ್ಣಾ ಎಂದು ಮಾತಾಡಿಸಿಬಿಟ್ಟಳು” ಎಂದು ಬರೆದರು. ಅಬ್ಬಬ್ಬಾ! ಅವಳು ಅಣ್ಣಾ ಅಂದಳಂತೆ, ಬೆಳಗೆರೆಗೆ ಕರುಳು ಚುರುಕ್ ಅಂತಂತೆ! ಬಹುಶಃ ಬೆಳಗೆರೆಯನ್ನು ನೋಡಿಯೇ ಶಿವರಾಜ್ ಕುಮಾರ್ ಅಣ್ಣತಂಗಿ ಎಂಬ ಚಿತ್ರ ಮಾಡಿರಬೇಕು. ಅಷ್ಟರ ಮಟ್ಟಿಗೆ ಕಲರ್ ಕಲರ್ ಆಗಿತ್ತು ಬೆಳಗೆರೆಯ ಕಾಗೆ. ಆದರೆ ಲಂಕೇಶ್ ಸಾಕ್ಷಿ ಸಮೇತ ಬೆಳಗೆರೆಯ ಹಣೆಬರಹ ಬಯಲಿಗೆಳೆದಾಗ ಇಡೀ ಚಿತ್ರರಂಗ ಬೆಚ್ಚಿಬಿದ್ದಿತ್ತು.
ಲಂಕೇಶ್ ಪತ್ರಿಕೆ ಓದಿದ ರೂಪಿಣಿ, ಜೈ ಜಗದೀಶ್, ಸುಂದರ್ ರಾಜ್ ಮತ್ತು ಹಲವಾರು ಗಣ್ಯರು ಪ್ರೆಸ್ ಮೀಟ್ ಮಾಡಿ ರವಿ ಬೆಳಗೆರೆಗೆ ಯಾಕಯ್ಯ ಹೀಗ್ ಮಾಡ್ದೇ ಎಂದು ಚಾರ್ಜ್ ಮಾಡಿದ್ದಾರೆ. ಇನ್ನು ಮನೆಗೆ ಬಂದದ್ದು ರಂಗನಾಥಸ್ವಾಮಿಯಲ್ಲ ಗಬ್ಬುನಾಥರಾಯ ಎಂದು ತಿಳಿದ ರೂಪಿಣಿ “ಬಂದಿದ್ದು ರವಿ ಬೆಳಗೆರೆ ಎಂದು ಗೊತ್ತಾಗಿದ್ದರೆ ಒದ್ದು ಹೊರಗಟ್ಟುತ್ತಿದ್ದೆ” ಎಂದಳು. ಬೆಳಗೆರೆಯ ಬಂಡಲ್ ಲೇಖನ ಓದಿ ಅವರ ಅಭಿಮಾನಿಗಳು ಮತ್ತು ಓದುಗರೇ “ಅಲ್ಲಯ್ಯಾ ರವಿ, ಸತ್ತವಳನ್ನು ಅದು ಹೆಂಗಯ್ಯಾ ಸಂದರ್ಶನ ಮಾಡಿ ಬರೆದೆ?” ಎಂದು ಕೇಳಿದರು. ಇದಾದ ನಂತರ ಕೆಲ ದಿನಗಳು ರವಿ ಬೆಳಗೆರೆ ನಾಪತ್ತೆ! ಹಲವಾರು ದಿನಗಳ ಬ್ರೇಕ್ ತೆಗೆದುಕೊಂಡು ವಾಪಸ್ ಬಂದ ಬೆಳಗೆರೆ, “ಖಾಸ್ಬಾತ್ನ ಡಬ್ಬದ ಮುಚ್ಚಳ ಯಾವಾಗ ಓಪನ್ ಆಗುತ್ತೋ ಗೊತ್ತಿಲ್ಲ.. ಓಪನ್ ಆದ್ರೆ ರೂಪಿಣಿ ವಿಷಯ ಎಲ್ಲ ಬಯಲಾಗುತ್ತದೆ” ಎಂದು ಏನೋ ಕಿಲಾಡಿಯ ಹಾಗೆ ಉತ್ತರ ಕೊಟ್ಟರು. ಮಜಾ ಎಂದರೆ ಬೆಳಗೆರೆಯ ಖಾಸ್ಬಾತ್ ಡಬ್ಬದ ಮುಚ್ಚಳ 20 ವರ್ಷಗಳಾದರೂ ಓಪನ್ನೇ ಆಗಲಿಲ್ಲಪ್ಪೋ.. ಮುಚ್ಚಳ ತೆಗೆಯದಕ್ಕಾಗದೇ ಕೊಳೆತು ನಾರುತ್ತಿದೆ. ಇದು ಪತ್ರಕರ್ತ ರವಿ ಬೆಳಗೆರೆಯ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ! ಈಗ ನಿಮ್ಮ ಮುಂದೆ ಉಸಿರಾಡುತ್ತಿರುವುದು ಕೇವಲ ರವಿ ಬೆಳಗೆರೆಯಷ್ಟೇ! ಪತ್ರಕರ್ತ ಅಲ್ಲ. ಅಂದಿನಿಂದ ಇಂದಿಗೂ ಕೆಲ ಜನರು ಇವರನ್ನು “ಏಡ್ಸ್ ಪತ್ರಕರ್ತ” ಎಂದೇ ಕರೆಯುತ್ತಾರೆ. ರವಿ ಬೆಳಗೆರೆ ಎಷ್ಟು ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾಗಿಲ್ಲ.
ಇನ್ನು ಈ ಮನುಷ್ಯ ವಿಶ್ವೇಶ್ವರ ಭಟ್ಟರ ಬಗ್ಗೆ ಬಾಯಿಗೆ ಬಂದ ಹಾಗೆ ಬರೆಯುತ್ತಾ “ವಿಶ್ವನನ್ನು ಅಂದು ಪೊಲೀಸರು ನ್ಯಾಯಾಲಯದಿಂದ ಹೊರ ಕರೆದುಕೊಂಡು ಬರುವಾಗ ಅಲ್ಲಿ ನೆರೆದಿದ್ದ ವಕೀಲರು ಎಲ್ಲರೂ ಸೇರಿ ಗುಮಿಗುಮಿ ಒದ್ದರು” ಎಂದು ಬರೆದುಕೊಂಡಿದ್ದಾರೆ. ಇಂಥ ಬೇಜವಾಬ್ದಾರಿತನದಿಂದ ಮನಸ್ಸಿಗೆ ತೋಚಿದ ಹಾಗೆ ಬರೆಯುವ ರವಿ ಬೆಳಗೆರೆಗೆ ನಾಚಿಕೆಯಾಗುವುದಿಲ್ಲವೇ? ಬೆಂಗಳೂರಿನ ವಕೀಲರು ಕಾನೂನನ್ನು ಕೈಗೆ ತಗೆದುಕೊಳ್ಳುವಷ್ಟು ದಡ್ಡರೇ ಬೆಳಗೆರೆಯವರೇ? ನನ್ನ ಸಂಬಂಧಿಕರಾದ ಮತ್ತು ಫ್ಯಾಮಿಲಿ ಫ್ರೆಂಡ್ ವಕೀಲರು ಅಂದು ನಿಮ್ಮ ಜೊತೆಗೇ ಇದ್ದರು. ಆದರೆ ಯಾರೂ ಆ ರೀತಿ ಅನುಚಿತ ವರ್ತನೆ ಮಾಡಿರಲಿಲ್ಲ. ಆದರೆ, ಕೂಗಾಡಿದ್ದು ಕಿರುಚಾಡಿದ್ದು ಮಾತ್ರ ವಕೀಲರ ಹಾಗೆ ವೇಷ ಧರಿಸಿ ಬಂದ ಕೆಲ ಪ್ರೀಪಯ್ಡ್ ಗೂಂಡಾಗಳು. ಇದನ್ನು ನಾನು ಹೇಳುತ್ತಿಲ್ಲ.. ಸ್ವತಃ ರವಿ ಬೆಳಗೆರೆ ಜೊತೆಗಿದ್ದ ವಕೀಲರೇ ನನಗೆ ಹೇಳಿದ್ದಾರೆ. ಬೆಳಗೆರೆ ಜೊತೆಗೆ ಯಾರ್ಯಾರೋ ಕಪ್ಪು ಕೋಟ್ ಧರಿಸಿ ಬಂದಿದ್ದರು. ಅವರುಗಳನ್ನು ನಾವು ಕೋರ್ಟ್ ಅಥವಾ ಕೋರ್ಟ್ ಆವರಣದಲ್ಲಿ ನೋಡಿಯೇ ಇರಲಿಲ್ಲ ಎಂದು ಸ್ವತಃ ವಕೀಲರೇ ಹೇಳಿಕೆ ಕೊಟ್ಟಿದ್ದಾರೆ. ಅಂದು ರವಿ ಬೆಳಗೆರೆ, ಅವರ ಮಾಜಿ ಮಿತ್ರ ವಿಶ್ವೇಶ್ವರ ಭಟ್ಟರಿಗೇ ಮುಹೂರ್ತ ಫಿಕ್ಸ್ ಮಾಡಿದ್ದರೋ ಏನೋ ಗೊತ್ತಿಲ್ಲ. ಆದರೆ ಭಟ್ಟರಿಗೆ ಒದೆ ಬೀಳಬೇಕಿತ್ತು ಎಂದು ಬೆಳಗೆರೆಗೆ ಬಹಳ ಆಸೆ ಇತ್ತು. ಆ ಆಸೆ ಈಡೇರದಿರುವುದಕ್ಕೆ ಕಾರಣವೂ ಇದೆ. ಒಂದು ಕೂದಲೂ ಸಹ ಕೊಂಕದಂತೆ ಭಟ್ಟರನ್ನು ಅಂದು ನ್ಯಾಯಾಲಯದ ಆವರಣದಲ್ಲಿ ಕಾಪಾಡಿಕೊಂಡು ಬಂದವರು ಅಂದಿನ ಡಿಸಿಪಿ ರವಿಕಾಂತೇಗೌಡರು. ಒಮ್ಮೆ ಬೆಳಗೆರೆ ಹೇಳುವ ಹಾಗೆ ವಕೀಲರು ಗುಮಿಗುಮಿ ಒದ್ದದ್ದೇ ಆದಲ್ಲಿ ರವಕಾಂತೇಗೌಡರು ಕರ್ತವ್ಯ ಲೋಪಸೆಗಿದ್ದಾರೆ ಎಂದು ಮನೆಗೆ ಕಳುಹಿಸುತ್ತಿದ್ದರು. ಆದರೆ ರವಿಕಾಂತೇಗೌಡರ ಮೇಲೆ ಅಂಥದ್ದಾವುದೂ ಆರೋಪ ಕೇಳಿಬಂದಿಲ್ಲ. ಆದರೆ ರವಿ ಬೆಳಗೆರೆಗೆ ಬಹುಶಃ ವಿಶ್ವೇಶ್ವರ ಭಟ್ಟರಿಗೆ ಗೂಂಡಾಗಳಿಂದ ಹೊಡೆಸಬೇಕು ಎಂಬ ಮಹದಾಸೆ ಇತ್ತು. ಅದು ಈಡೇರದ ಕಾರಣ, ವಿಶ್ವನಿಗೆ ಗುಮಿಗುಮಿ ಒದ್ದರು ಎಂದು ಬರೆದು ಮನಸ್ಸಿಲ್ಲಿದ್ದ ಚಟ ತೀರಿಸಿಕೊಂಡರು ರವಿ ಬೆಳಗೆರೆ. ಈ ವಿಷಯವಾಗಿ ರವಿಕಾಂತೇಗೌಡರು ತಮ್ಮ ಆಪ್ತರ ಬಳಿ ಮಾತಾಡುತ್ತಿದ್ದ ಮಾತನ್ನು ಕೇಳಿದರೆ ಸಾಕು ರವಿ ಬೆಳಗೆರೆ, ಚಪಲ ತೀರಿಸಿಕೊಳ್ಳಲು ಎಷ್ಟು ಸುಳ್ಳು ಬರೆದಿದ್ದಾರೆ ಎಂದು ತಿಳಿದುಬಿಡುತ್ತದೆ. ರವಿಕಾಂತೇಗೌಡರು ಹೇಳಿದ್ದು ಹೀಗೆ.. ನಾನು ಅಂದು ವಿಶ್ವೇಶ್ವರ ಭಟ್ಟರ ಜೊತೆಗೇ ಇದ್ದೆ. ಒಂದು ಕ್ಷಣ ಕೂಡ ಅವರನ್ನು ಬಿಟ್ಟು ಹೋಗುವುದಿರಲಿ ಅವರ ಮೇಲಿಟ್ಟಿದ್ದ ದೃಷ್ಟಿ ಸಹ ಆಚೆ ಈಚೆ ಆಗಿರಲಿಲ್ಲ. ಇನ್ನು ರವಿ ಬೆಳಗೆರೆಯೂ ವಕೀಲರ ದಂಡಿನ ಜೊತೆಗೆ ಹೊರೆಗೆ ಕೇಕೆ ಹಾಕುತ್ತಾ ನಿಂತಿದ್ದರು. ಆದರೆ ಅವರು ಪತ್ರಿಕೆಯಲ್ಲಿ “ವಕೀಲರೆಲ್ಲರೂ ಸೇರಿ ಒದ್ದರು” ಎಂದು ಎಲ್ಲಿ ಬರೆದರೋ ನನಗೆ ಅವರ ಮೇಲಿದ್ದ ಗೌರವ ಸಂಪೂರ್ಣವಾಗಿ ಕಿತ್ತುಬಿದ್ದಿತ್ತು. ದ್ವೇಶಕ್ಕಾಗಿ ಈ ಸುಳ್ಳು ಬರೆಯುವ ಇವರು ನಿಜಕ್ಕೂ ಅಕ್ಷರ ಹಾದರ ಮಾಡುತ್ತಿದ್ದಾರೆ ಎಂದು ನೇರವಾಗಿ ಹೇಳಿಬಿಟ್ಟರು ರವಿಕಾಂತೇಗೌಡರು ಅಂದು ಅವರ ಆಪ್ತರು ನನಗೆ ತಿಳಿಸಿದ್ದಾರೆ ಇದು ಪತ್ರಕರ್ತ ರವಿ ಬೆಳಗೆರೆಯ ಹಣೆಯಬರಹ!
ರವಿ ಬೆಳಗೆರೆ ಬಗ್ಗೆ ಹೇಳಲು ತಾಜಾ ತಾಜಾ ಉದಾಹರಣೆಗಳಿಗೇನು ಕೊರತೆ ಇಲ್ಲ. “ಬಡವ ಬೆಳಗೆರೆ ಎದುರಿಗೆ ಬಂದರೆ ಪೊರಕೆ ಸೇವೆ ಮಾಡುತ್ತೇನೆ” ಎಂದು ಕಾದು ಕುಳಿತಿರುವ ಹೆಣ್ಣುಮಕ್ಕಳು ಬಹಳ ಇದ್ದಾರೆ. ಅಂಥದ್ದೇ ಸಮಯಕ್ಕಾಗಿ ಓಬವ್ವಳಂತೆ ಕಾದು ಕುಳಿತಿರುವುದು ದಾವಣಗೆರೆಯ ಸುನಿತಾ ಮಲ್ಲಿಕಾಜುನ್! ನೀವು ಹಾಯ್ ಬೆಂಗಳೂರ್ ಪತ್ರಿಕೆಯ ಖಾಯಂ ಓದುಗರಾಗಿದ್ದರೆ ಸುನಿತಾ ಮಲ್ಲಿಕಾರ್ಜುನ್ರ ಮಾನ ಹರಣ ಮಾಡಿರುವುದನ್ನು ನೀವು ಓದಿರುತ್ತೀರ. ರವಿ ಬೆಳಗೆರೆಯ ಸುಳ್ಳು ವರದಿ/ಬರಹಗಳಿಂದ ಬೇಸತ್ತ ಸುನಿತಾ ನಿನಗೆ ಗ್ರಹಚಾರ ಬಿಡಿಸುತ್ತೇನೆ ಎಂದು ಹಲವಾರು ವರ್ಷಗಳಿಂದ ಬೆಳಗೆರೆಯ ಮೇಲೆ ಕೇಸ್ ಹಾಕುತ್ತಾ ಬಂದಳು. ರವಿ ಬೆಳಗೆರೆಗೆ ಎಷ್ಟರ ಮಟ್ಟಿಗೆ ಪ್ಯಾಂಟ್ ಒದ್ದೆ ಮಾಡಿಸಿದ್ದಳು ಎಂದರೆ ದಾವಣಗೆರೆ ಟು ಬೆಂಗಳೂರ್.. ಬೆಂಗಳೂರ್ ಟು ದಾವಣಗೆರೆ ಟ್ರಿಪ್ ಹೊಡೆದು ಖಾಸಗೀ ಬಸ್ ಡ್ರೈವರುಗಳಿಗಿಂತಲೂ ಹೆಚ್ಚು ಪ್ರಯಾಣ ಕೀರ್ತಿ ಬೆಳಗೆರೆಗೆ ಸಿಗುವಂತೆ ಮಾಡಿದ್ದಳು. ಕೊನೆಗೆ ನ್ಯಾಯಾಲಯದಲ್ಲೂ ಬೆಳಗೆರೆ ಪರ ತೀರ್ಪು ಸಿಗದೇ, ಇನ್ನು ನನ್ನ ಕೈಲಿ ಆಗಲ್ಲಾ ಸುನಿತಾ… ಏನೂ ಅಂತ ಒಂದ್ ಇತ್ಯರ್ಥ ಮಾಡ್ಕಬುಡಣಾ ಬಾ ತಾಯಿ ಎಂದು ಕೈಮುಗಿದು ಕರೆದಿದ್ದರು ರವಿ. ಆದರೆ ಸುನಿತಾ ದಿಟ್ಟ ಹೆಣ್ಣು! ಅಷ್ಟು ಸುಲಭವಾಗಿ ಬಗ್ಗಲ್ಲ… ಬೆಳಗೆರೆ ದುರಿಗೆ ಸಿಕ್ಕರೆ ಪೊರಕೆಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ ರೆಕಾರ್ಡು ಇಂದಿಗೂ ಮಾಧ್ಯಮಗಳ ಬಳಿ ಇದೆ. ಏನೇ ಆಗಲಿ ಒಂದು ಹೆಣ್ಣಿನ ಮಾನ ಮರ್ಯಾದೆ ಹರಾಜು ಹಾಕುವಲ್ಲಿ ರವಿ ಬೆಳಗೆರೆ ಎತ್ತಿದ ಕೈ.
ವಿಶ್ವೇಶ್ವರ ಭಟ್ಟರಿಗೆ “ಭಟ್ಟ ಭಟ್ಟ ಹೆಂಡತಿಯರೆಷ್ಟು” ಎಂದು ಕೇಳುವ ರವಿ ಬೆಳಗೆರೆಗೆ ಅದೇ ಪ್ರಶ್ನೆ ಕೇಳಬೇಕಿದೆ. ಹೋಗಲಿ ಕಟ್ಟಿಕೊಂಡ ಹೆಂಡತಿಯರಾದರೂ ಸುಖ ಜೀವನ ನಡೆಸುತ್ತಿದ್ದಾರಾ? ಇಲ್ಲ. ರವಿ ಬೆಳಗೆರೆಗೆ ಆಗಲೇ ಒಂದು ಮದುವೆಯಾಗಿದ್ದರೂ ಅದು ಏಕೆ ಮತ್ತೊಬ್ಬಳ ಮೇಲೆ ಕಣ್ಣು ಬಿತ್ತೋ ಗೊತ್ತಿಲ್ಲ. ಇವರ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರ ಅವರ ಆಫೀಸಿನಲ್ಲೇ ಕೆಲಸ ಮಾಡುತ್ತಿದ್ದ ಯಶೋಮತಿ ಆಚಾರ್.. ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಆಡುತ್ತಿದ್ದ ಕುಚ್ಚಿ ಕುಚ್ಚಿ ಹೆಚ್ಚು ದಿನಗಳು ಗೂಡಿನಲ್ಲಿರಲಿಲ್ಲ. ಕೊನೆಗೆ ರಾತ್ರೋ ರಾತ್ರಿ ಮದುವೆಯೂ ಮಾಡಿಕೊಂಡು ಬಂದರು ರವಿ. ಈ ರವಿಯನ್ನ ನಂಬಿ ಬಂದ ಬೆಳಗೆರೆಗಿಂತ ಸುಮಾರು 12-15 ವರ್ಷ ಚಿಕ್ಕವರಾದ ಯಶೋಮತಿ ಆಚಾರ್ಗೆ ರವಿ ಬೆಳಗೆರೆಯ ಕರಾಳ ಮುಖದ ಬಗ್ಗೆ ಗೊತ್ತಿರಲಿಲ್ಲ. ಯಶೋಮತಿಗೆ ಮಕ್ಕಳಾದ ಮೇಲೆ ತನ್ನ ಹೆಂಡಿತಿಗೆ ತನ್ನ ಆಫೀಸಿನಲ್ಲೇ ಇರುವ ವರದಿಗಾರನೊಬ್ಬನ ಜೊತೆ ಸಂಬಂಧವಿದೆ ಎಂದು ಒಡವೆ, ಹೆಸರಿನಲ್ಲಿದ್ದ ಆಸ್ತಿಗಳನ್ನು ಕಿತ್ತುಕೊಂಡು ಹೊರದಬ್ಬಿದ್ದರು ರವಿ ಬೆಳಗೆರೆ. ಆಕೆಯ ಕಣ್ಣೀರು ಕೇಳೋರ್ಯಾರು? ಇಂದಿಗೂ ರವಿ ಬೆಳಗೆರೆಯ ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ ಯಶೋಮತಿ ಆಚಾರ್. ಪಾಪ ಆಕೆ ಪಕ್ಕಾ ಭಾರತೀಯ ನಾರಿ. ಗಂಡನನ್ನು ದೂರುತ್ತಿಲ್ಲ. ಗಂಡ ಚನ್ನಾಗಿರಲಿ ಎಂದು ಸುಮ್ಮನಿದ್ದಾರೆ. ಯಶೋಮತಿ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊತ್ತಿಗೆ ಕೋರ್ಟು, ಕೇಸು, ಪರಿಹಾರ ಎಂದು ರವಿ ಬೆಳಗೆರೆಯನ್ನು ದಿವಾಳಿ ಎಬ್ಬಿಸುತ್ತಿದ್ದರು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರಬೇಕಾದರೆ ಇನ್ನೊಬ್ಬರ ತಟ್ಟೆಯಲ್ಲಿ ನೊಣ ಇದೆ ಎಂದು ಮಾತಾಡುವ ಇಂಥಾ ರವಿ ಬೆಳಗೆರೆಗೆ ವಿಶ್ವೇಶ್ವರ ಭಟ್ಟರ ಬಗ್ಗೆ ಸುಳ್ಳು ಬೊಗಳುವ ನೈತಿಕತೆಯಾದರೂ ಇದೆಯಾ?
ಇಂಥ ಮನುಷ್ಯ ವಿಶ್ವೇಶ್ವರ ಭಟ್ಟರ ಬಗ್ಗೆ ಮಾತಾಡಲು ಎಷ್ಟು ಅರ್ಹರು ಎಂದು ಓದುಗರೇ ನೀವೇ ಆಲೋಚಿಸಿ. ಕೈಲಾಗದವನು ಮೈಪರಚಿಕೊಂಡನಂತೆ ಎನ್ನುವ ಸ್ಥಿತಿ ರವಿ ಬೆಳಗೆರೆಗೆ ನಿರ್ಮಾಣವಾಗಿದೆ. ಏಕೆ ಬೆಳಗೆರೆ ಯಾವಾಗಲೂ ಭಟ್ಟರ ವಿರುದ್ಧ ಅರಚಾಡುತ್ತಾರೆ ಎನ್ನುವುದಕ್ಕೂ ಉತ್ತರವಿದೆ. ಇದುವರೆಗೂ, ಅಂದರೆ 2005ರ ನಂತರ ಈ ರವಿ ಬೆಳಗೆರೆಯೆಂಬ ಬರಹಗಾರ ಬರೆದಿರುವ ಪುಸ್ತಕಗಳು ಎಷ್ಟರ ಮಟ್ಟಿಗೆ ಸೇಲ್ ಆಗಿದೆ ಅಥವಾ ಎಷ್ಟು ಬಾರಿ ಮರು-ಮುದ್ರಗೊಂಡಿದೆ ಎಂಬುದನ್ನು ಲೆಕ್ಕ ಹಾಕಿ. ಅಬ್ಬಬ್ಬಾ ಎಂದರೆ 1 ತಪ್ಪಿದರೆ ಎರಡು ಸಿಗಬಹುದು. ಇನ್ನು ಇತ್ತೀಚೆಗೆ ರವಿ ಬೆಳಗೆರೆ ಇತ್ತೀಚೆಗೆ ಯಾವ ಪುಸ್ತಕ ಬರೆದಿದ್ದಾರೆ ಹೇಳಿ? ಯಾವುದೂ ಇಲ್ಲ.. ಜನರಿಗೆ ಈ ಮನುಷ್ಯನ ಬುದ್ಧಿ ಗೊತ್ತಾಗದ ದಿನಗಳಲ್ಲಿ “ಹಿಮಾಲಯನ್ ಬ್ಲಂಡರ್” ಇನ್ನಿತರ ಪುಸ್ತಕಗಳು ಜಿಲೇಬಿಯಂತೆ ಮಾರಾಟವಾಗುತ್ತಿತ್ತು. ಆದರೆ 2005ರ ನಂತರ ಇವರನ್ನು ಶನಿ ಆವರಿಸಿದ್ದ. ಯಾವ ಪುಸ್ತಕಗಳೂ ಸೇಲ್ ಆಗಿರಲಿಲ್ಲ. ಯಾವ ಕಾರ್ಯಕ್ರಮಗಳಿಗೂ ಆಹ್ವಾನ ಬರುತ್ತಿಲ್ಲ. ಆದರೆ, ವಿಶ್ವೇಶ್ವರ ಭಟ್ಟರು ಎಷ್ಟೋ ವರ್ಷಗಳ ಹಿಂದೆ ಬರೆದಿರುವ ಪುಸ್ತಕಗಳು ಇಂದಿಗೂ ಸಹ ಮರುಮುದ್ರಣವಾಗುತ್ತಿದೆ. ಜನಪ್ರೀಯತೆ ಪಡೆಯುತ್ತಿದ್ದಾರೆ. ಅಲ್ಲಿ ಇಲ್ಲಿ ಎಂದು ನಿತ್ಯವೂ ಕಾರ್ಯಕ್ರಮಗಳಿಗೆ ತೆರಳಿ ಭಾಷಣ ಮಾಡುತ್ತಿದ್ದಾರೆ. ಇದು ರಿವಿ ಬೆಳಗೆರೆಗೆ ಹೊಟ್ಟೆ ಉರಿ ತಂದಿದೆ. ಅಸಲಿಗೆ ಈ ರವಿ ಬೆಳಗೆರೆ ನಡೆಸುತ್ತಿರುವ ಹಾಯ್ ಬೆಂಗಳೂರ್ ಪತ್ರಿಕೆ 5000 ಕಾಪಿಗಳ ಮೇಲೆ ಸೇಲ್ ಆಗುತ್ತಿಲ್ಲ. ಹೀಗಾಗಿ ಈಗಾಗಲೇ ಮೈ ಪರಚಿಕೊಂಡು ಹುಣ್ಣಾಗಿ, ಇನ್ನು ಪರೆಚಿಕೊಳ್ಳಲು ಜಾಗವಿಲ್ಲದೇ, ನೆವೆಯನ್ನೂ ತಡೆಯಲಾಗದೇ ಸಹೋದ್ಯೋಗಿಗಳ ಬಳಿ ಹೇಳಿ ಭಟ್ಟರ ಬಗ್ಗೆ ಬಾಯಿಗೆ ಬಂದ ಹಾಗೆ ಬರೆಸುತ್ತಿದ್ದಾರೆ. ಇದು ನಿಮ್ಮ ರವಿ ಬೆಳಗೆರೆಯ ಅಸಲಿ ಹಕೀಕತ್! ರವಿ ಬೆಳಗೆರೆ ನಿಮ್ಮ ಬಗ್ಗೆ ಬಾಯಿಗೆ ಬಂದ ಹಾಗೆ ಬರೆದಿದ್ದಾನಲ್ಲ ಸಾರ್.. ಇದಕ್ಕೇನಂತೀರಾ ಎಂದು ಕೇಳಲು ಸ್ವತಃ ವಿಶ್ವೇಶ್ವರ ಭಟ್ಟರಿಗೆ ಕರೆ ಮಾಡಿದಾಗ ಅವರು ಹೇಳಿದ್ದಿಷ್ಟೇ “ಅವನು ನನ್ನ ಬಗ್ಗೆ ಬರೆದರೆ ನಾನ್ ಯಾಕ್ ಕೇರ್ ಮಾಡ್ಬೇಕು? ಅವನ ಪುಸ್ತಕ, ಪತ್ರಿಕೆಗಳನ್ನು ಓದುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿದೆ. ಹಾಗಾಗಿ ಅವನ ಬಗ್ಗೆ ಮಾತಾಡಲು ಇಚ್ಛಿಸುವುದಿಲ್ಲ” ಎಂದರು. ಆಗ ನನಗೆ ವೈಯಕ್ತಿಕವಾಗಿ ಅನಿಸಿದ್ದು ಇಷ್ಟೇ.. ಮುಹೂರ್ತ ಇಡಲು ಹೊರಟಿದ್ದ ರವಿ ಬೆಳಗೆರೆ ಎಲ್ಲಿ? ದೇವರ ಕೋಣೆಯಲ್ಲಿ ಮೂರ್ತಿಯಂತೆ ಕುಳಿತು ಮಂದಹಾಸ ಬೀರುತ್ತಿರುವ ವಿಶ್ವೇಶ್ವರ ಭಟ್ಟರೆಲ್ಲಿ?!

9,439 thoughts on “ರೂಪಿಣಿಯಿಂದ ಗುಮಿಗುಮಿ ಒದೆಸಿಕೊಂಡವನಿಂದ ಏನನ್ನು ನಿರೀಕ್ಷಿಸುವುದು?

 1. Pingback: read here
 2. Pingback: Gambia
 3. Pingback: Punk rock clothes
 4. Pingback: direct marketing
 5. Pingback: phone numbers
 6. Pingback: online internet
 7. Pingback: Phonestheme
 8. Pingback: guitar picks
 9. Pingback: Ioannina
 10. Pingback: Soccer Kids
 11. Pingback: lovetts pet care
 12. Pingback: mobile internet
 13. Pingback: silk bra
 14. Pingback: notebook fujitsu
 15. Pingback: fashion bug boots
 16. Pingback: kids video
 17. Pingback: melbourne
 18. Pingback: webcam porno
 19. Pingback: Lakefork tx
 20. Pingback: ecograf Doppler
 21. Pingback: Mental Math
 22. Pingback: Car text check
 23. Pingback: stained concrete
 24. Pingback: webseite erstellen
 25. Pingback: plumber
 26. Pingback: stained concrete
 27. Pingback: movie2k
 28. Pingback: dr Medora
 29. Pingback: seo service
 30. Pingback: bikini luxe coupon
 31. Pingback: seo pittsburgh
 32. Pingback: roofing
 33. Pingback: lifelock reviews
 34. Pingback: playpen for dogs
 35. Pingback: low carb vodka
 36. Pingback: clean carpet
 37. Pingback: Bridgette
 38. Pingback: Seo
 39. Pingback: Credit Repair
 40. Pingback: free promotion
 41. Pingback: swap.com
 42. Pingback: Business Ideas
 43. Together with every little thing that seems to be building inside this specific subject material, your perspectives are generally rather refreshing. Nevertheless, I beg your pardon, because I do not subscribe to your whole idea, all be it stimulating none the less. It would seem to me that your opinions are actually not entirely validated and in fact you are your self not even totally confident of the argument. In any event I did enjoy reading through it.

 44. Throughout the awesome pattern of things you’ll get an A with regard to effort. Where exactly you lost me ended up being in all the particulars. You know, people say, the devil is in the details… And it couldn’t be more true at this point. Having said that, permit me inform you what exactly did give good results. The article (parts of it) is actually extremely convincing and this is most likely why I am taking an effort to comment. I do not make it a regular habit of doing that. Secondly, whilst I can certainly notice a leaps in reasoning you come up with, I am not really certain of exactly how you appear to connect your details which inturn produce the final result. For the moment I will yield to your issue but hope in the near future you actually link your facts much better.

 45. Pingback: free text
 46. Pingback: Google
 47. Pingback: Escort
 48. Pingback: duster extender
 49. Pingback: Dentist cedar park
 50. Pingback: forex broker list
 51. Pingback: allandale plumber
 52. Pingback: This Site
 53. Pingback: kona coffee
 54. Pingback: Lakiesha
 55. Pingback: kona coffee
 56. Pingback: th9 war base
 57. Pingback: Austin Sunshades

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya