ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳಿಗೆ ಒಂದೋ ವರ್ಗಾವಣೆ, ಅಥವಾ ಸಾವೆಂಬ ಬಹುಮಾನ!

 

“ಸುಮ್ಮನೆ ಬದುಕಿ ವಯಸ್ಸು ಸವೆಸುವುದಲ್ಲ. ಬದುಕಿದ್ದರೆ ಹುಲಿಯಂತೆ ನಾಲ್ಕು ದಿನ ಬದುಕಬೇಕು. ಸಿಕ್ಕಿದ ಅಧಿಕಾರವನ್ನು ಜನರ ಹಿತಕ್ಕೆ, ಜನರ ಕಲ್ಯಾಣಕ್ಕೆ ಬಳಸೋಣ”! ಈ ಸಾಲಲ್ಲಿ ನಿಮಗೆಲ್ಲಾದರೂ ನಿರುತ್ಸಾದ ಕಳೆ ಎಳೆಯಷ್ಟಾದರೂ ಸಿಕ್ಕಿದೆಯೇ? ಇನ್ನೇನು ಆತ್ಮಹತ್ಯೆಗೆ ಶರಣಾಗುವುದಕ್ಕೆ ಹೋಗುವವನೂ ಸಹ ಈ ಮಾತುಗಳನ್ನು ಕೇಳಿದರೆ, ಹೌದು. ಬದುಕಿದರೆ ಹೀಗೆ ಬದುಕಬೇಕು ಎನ್ನುವಷ್ಟರ ಮಟ್ಟಿನ ಉತ್ಸಾಹದ ಮಾತುಗಳು. ಇಂಥ ಉತ್ಸಾಹದ ಹೇಳಿಕೆ ಕೊಟ್ಟ ಒಬ್ಬ ದಕ್ಷ ಅಧಿಕಾರಿ ಡಿ.ಕೆ.ರವಿ, ಆತ್ಮಹತ್ಯೆಗೆ ಶರಣಾದರು ಎಂದರೆ ನೀವು ನಂಬಲೇ ಬೇಕು. ನಂಬದಿದ್ದರೆ ನಿಮಗೂ ಅದೇ ಪರಿಸ್ಥಿತಿ ಬರಬಹುದು ಹುಷಾರ್! ರವಿಗೆ ಹೆಚ್ಚೇನು ವಯಸ್ಸಾಗಿರಲಿಲ್ಲ. ಕೇವಲ 35ರ ಹರೆಯವಷ್ಟೇ. ಇಷ್ಟು ಸಣ್ಣ ವಯಸ್ಸಿನಲ್ಲೇ ಅದೆಷ್ಟು ಸಾಧನೆ ಮಾಡಿದ್ದಾರೆಂದರೆ, ಅವರನ್ನು ತಮ್ಮ ಜೀವನದ ರೋಲ್ ಮಾಡೆಲ್ ಆಗಿ ಕೆಲವರು ಒಪ್ಪಿಕೊಂಡರೆ, ಕೆಲವರು ಅವರಲ್ಲಿ ದೇವರನ್ನು ಕಾಣುತ್ತಿದ್ದರು. ತಾನು ಪಾಸು ಮಾಡಿದ ಐಎಎಸ್ ಪರೀಕ್ಷೆಯನ್ನು ಇನ್ನೊಬ್ಬರೂ ಪಾಸು ಮಾಡಲಿ ಎಂದು ಅಭ್ಯರ್ಥಿಗಳಿಗೆ ಉತ್ತೇಜನ ತುಂಬಿಸುತ್ತಿದ್ದವರೊಬ್ಬ ಆತ್ಮಹತ್ಯೆ ಮಾಡಿಕೊಂಡಿಕೊಂಡರೆಂದರೆ ನೀವು ನಂಬುತ್ತೀರಾ? ಬ್ರಷ್ಟ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಂಡನೆಂದರೆ ಎಲ್ಲರೂ ನಂಬುತ್ತಾರೆ ಆದರೆ ದಕ್ಷ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡರು ಎಂದೊಡನೆ, ನಾನು ಹಲವಾರು ಗಣ್ಯರು, ಪೊಲೀಸರು, ಮತ್ತು ರವಿಯ ಸ್ನೇಹಿತರನ್ನು ವಿಚಾರಿಸಿದಾಗ ಅವರೆಲ್ಲ ಹೇಳಿದ್ದು ಒಂದೇ, “ರವಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಸಾರ್.. ಆತ ಒಬ್ಬ ಸಿಂಹ. ಸಿಂಹ ಎಲ್ಲಿಯಾದ್ರೂ ಆತ್ಮಹತ್ಯೆ ಮಾಡಿಕೊಳ್ಳುವದನ್ನು ನೋಡಿದ್ದೀರಾ? ಬೇಡ ಕಥೆಯಲ್ಲಾದ್ರೂ ಕೇಳಿದ್ದೀರ?”. ಹೌದು, ದಕ್ಷ ಅಧಿಕಾರಿ, ಬ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಐಎಎಸ್ ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡೋ ಅಥವಾ ಇನ್ನೇನೋ ಕಾರಣಗಳಿಂದಲೋ ಇಹಲೋಕ ತ್ಯಜಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ನಾವು ಸುಮ್ಮನಿರಬಹುತ್ತು. ಆದರೆ, ಇದು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ ಎಂದು ಡಿ.ಕೆ ರವಿ ಪರಿಚಿತರಿಂದ ಹಿಡಿದು ಅಪರಿಚಿತರವರೆಗೂ ಎಲ್ಲರೂ ಹೇಳುತ್ತಿದ್ದಾರೆ. ಹಾಗಾದರೆ ಆ “ನಿಗೂಢ” ಕಾರಣವೇನು? ಎಲ್ಲರ ಕಣ್ಣಿಗೆ ಬೀಳುವ ಮೊದಲ ಕಾರಣವೇ ರವಿಯವರು ಇತ್ತೀಚೆಗೆ ತೆರಿಗೆಗಳ್ಳರ ಮನೆಗಳು ಮತ್ತು ಕಂಪನಿಗಳ ಮೇಲೆ ಸರಣಿ ದಾಳಿ ನಡೆಸಿದದ್ದರು. ಅವರು ಹೇಗೆ ರೇಡ್ ಮಾಡುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಿಲ್ಲಿದೆ ನೋಡಿ.
1.) ಡಿಸೆಂಬರ್ 2014: ಒಟ್ಟು 67 ಚಿನ್ನದ ಆಭರಣಗಳ ಅಂಗಡಿಯ ಮೇಲೆ ದಾಳಿ. ಬೆಂಗಳೂರಿನಲ್ಲೇ 24 ತೆರಿಗೆಗಳ್ಳ ಅಂಗಡಿಗಳ ಮೇಲೆ ದಾಳಿ.
ತೆರಿಗೆ ತಪ್ಪಿಸಿ ಮೋಸ ಮಾಡುತ್ತಿದ್ದ 33 ಸಿನೆಮಾ ಥಿಯೇಟರ್‍ಗಳ ಮೇಲೆ ದಾಳಿ.
2.)ಜನವರಿ 2015: ಒಟ್ಟು 25 ಅನಧಿಕೃತ ಶಾಪಿಂಗ್ ಕಾಂಪ್ಲೆಕ್ಸ್ ಮೇಲೆ ದಾಳಿ.
3.) ಫೆಬ್ರವರಿ 2015: ಬಿಲ್ಡರ್ ಒಬ್ಬ ಸುಮಾರು 10ಕೋಟಿಗೂ ಅಧಿಕ ವ್ಯಾಟ್ ಕಟ್ಟದೇ ಸರ್ಕಾರಕ್ಕೆ ಮೋಸ ಮಾಡಿದ್ದನ್ನು ಗುರುತಿಸಿ ಆತನಿಗೆ ನೋಟಿಸ್
4.) ಮಾರ್ಚ್ 2015: ಸಿಂಗಪೂರ್ ಮೂಲದ ಬಿಲ್ಡರ್‍ಗಳ ಆಸ್ತಿಗಳ ಮೇಲೆ ದಾಳಿ. ಅವರ ಅಕ್ರಮ ಚಟುವಟಿಗೆಗಳೆಲ್ಲ ಬಯಲು.

ಈ ದಾಳಿಗಳ ಸಂಖ್ಯೆ ನೋಡಿ. ಒಂದು ರೇಡ್ ಮಾಡುವ ಮುನ್ನ ಸಾಕಷ್ಟು ಅಧ್ಯಯನ ನಡೆಸಿರಬೇಕು. ದಾಳಿ ನಡೆಸಿವವನ ಪೊಲಿಟಿಕಲ್ ಸಪೋರ್ಟ್ ತಿಳಿದುಕೊಳ್ಳಬೇಕು, ಅವನು ಮುಂದೆ ಏನು ಮಾಡಬಹುದೆಂದು ಮೊದಲೇ ಊಹಿಸಿರಬೇಕು. ಏಕೆಂದರೆ ದಾಳಿ ಮಾಡುತ್ತಿರುವುದು ನಮ್ಮ ನಿಮ್ಮ ಮನೆಗಳನ್ನಲ್ಲ. ಬದಲಿಗೆ ಬ್ರಷ್ಟ ತಿಮಿಂಗಲಗಳನ್ನ. ಆದರೆ ತಿಂಗಳಲ್ಲಿ 67 ದಾಳಿ ಮಾಡುವ ಮನುಷ್ಯನಿಗೆ ಅಧ್ಯಯನ ನಡೆಸಿ, ಪ್ಲಾನ್ ಮಾಡುವ ಸಮಯವಾದರೂ ಎಲ್ಲಿತ್ತು? ಅದೆಷ್ಟು ಕಾಲ ನಿದ್ದೆಗೆಟ್ಟಿರಬಹುದು? ಆತ ಅದೆಷ್ಟು ಕಾಲ ತನ್ನ ಕುಟುಂಬವನ್ನು ಬಿಟ್ಟಿದ್ದು, ಇಂಥ ರೇಡ್‍ಗಳನ್ನು ಮಾಡಿದ್ದಾರೆಂದು ನೀವೇ ಊಹಿಸಿ. ಇಷ್ಟೇ ಅಲ್ಲ. ಇದು ಕೇವಲ ಸ್ಯಾಂಪಲ್ ಅಷ್ಟೇ! ದೊಡ್ಡ ದೊಡ್ಡ ಐಟಿ ಕಂಪನಿಗಳ ಮೇಲೆ ದಾಳಿ, ರಾಜಕಾರಣಿಗಳ ಮನೆಗಳ ಮೇಲೆ ದಾಳಿ. ಬೇರೆ ಯಾರೋ ಏಕೆ, ರಾಜ್ಯದ ಗೃಹ ಸಚಿವ ಜಾರ್ಜ್‍ರ ಆಸ್ತಿಯ ಮೇಲೂ ದಾಳಿ ನಡೆಸಿದ್ದರು. ಸತತ ದಾಳಿಗಳ ಪರಿಣಾಮವೋ ಏನೋ, ರವಿಗೆ ಸುಮಾರು ತಿಂಗಳಿನಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಅದೂ ದೂರದ ದುಬೈನಿಂದ. ಇದಕ್ಕೆಲ್ಲ ಕ್ಯಾರೇ ಎನ್ನದ ರವಿಗೆ, ವರ್ಗಾವಣೆಯೆಂಬ ಶಿಕ್ಷೆಯೂ ಆಗಿತ್ತು. ಒಳ್ಳೆಯವರು ಎಲ್ಲಿದ್ದರೂ ಒಳ್ಳೆಯದನ್ನೇ ಮಾಡುತ್ತಿರುತ್ತಾರೆ ಎಂಬಂತೆ, ಹೋದಲೆಲ್ಲ ಬಿಲದಲ್ಲಿ ಅಡಗಿರುವ ಬ್ರಷ್ಟರನ್ನು ಪತ್ತೆ ಹಚ್ಚಿ ಬಯಲಿಗೆಳೆಯುತ್ತಿದ್ದರು.

ಆದರೀಗ ನಿಷ್ಠಾವಂತ ಅಧಿಕಾರಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಏಕೆ ಹೀಗೆ? ಕಾಲೇಜಿನ ದಿನಗಳಲ್ಲಿ ನಿತ್ಯವೂ ದೇಶಕ್ಕೆ ಸೇವೆ ಸಲ್ಲಿಸುವ ಕನಸ್ಸು ಕಾಣುತ್ತಾ, ಎಲ್ಲರಿಗೂ ಸಿಗದ ಅಪರೂಪದ ಅವಕಾಶ ಸಿಕ್ಕಾಗ ಹೆಂಡತಿ ಮಕ್ಕಳು ಎಂಬುದನ್ನೂ ನೋಡದೇ, ಪೊಲೀಸ್, ಐಎಎಸ್ ಅಧಿಕಾರಿಗಳಾಗಿ ಸೇವೆ ಆರಂಭಿಸುವಷ್ಟರಲ್ಲೇ ಕನಸ್ಸುಗಳು ನುಚ್ಚು ನೂರಾಗುವಂಥ ಘಟನೆಗಳು ಕಣ್ಣು ಮುಂದಿರುತ್ತದೆ. ಒಬ್ಬ ಅಧಿಕಾರಿ ಬ್ರಷ್ಟರಾಗದೇ ಭಾರತದಲ್ಲಿರಲು ಸಾಧ್ಯವೇ ಇಲ್ಲವಾ? “ಭಾರತ” ಎನ್ನುವುದು ಬಹಳ ದೊಡ್ಡ ಮಾತಾಯಿತು ಬಿಡಿ. ನಮ್ಮ ಕರ್ನಾಟಕದ ಇತಿಹಾಸವನ್ನೇ ಗಮನಿಸೋಣ. ಜನವರಿ 8ರಂದು ಮಲ್ಲಿಕಾರ್ಜುನ್ ಬಂಡೆಯೆಂಬ ದಕ್ಷ ಪೊಲೀಸ್ ಸಬ್ ಇಸ್ಪೆಕ್ಟರ್‍ರನ್ನು ಹತ್ಯೆ ಮಾಡಲಾಗಿತ್ತು. ಇಲಾಖೆಗಳ ಮಾಹಿತಿಯ ಪ್ರಕಾರ, ಬಂಡೆ, ಮುನ್ನಾ ದರ್ಬದರ್ ಎಂಬ ಸುಫಾರಿ ಹಂತಕನನ್ನು ಹಿಡಿಯುವಾಗ ಮುನ್ನಾ ಪಿಸ್ತೂಲ್‍ನಿಂದ ಹೊರಟ ಗುಂಡು ನೇರವಾಗಿ ಬಂಡೆಯ ತೆಲೆಗೆ ಹೊಕ್ಕಿದ್ದರಿಂದ ಆತ ಅಸುನೀಗಿದ್ದ ಎಂದು. ಆದರೆ, ಇನ್ನೊಂದು ಮಾಹಿತಿಯೇನೆಂದರೆ ಅಲ್ಲಿದ್ದ ಐಜಿಪಿ ವಾಝಿರ್ ಮತ್ತು ಬಂಡೆಯ ನಡುವೆ ಬಹಳ ವೈಷಮ್ಯವಿತ್ತು. ಒಂದು ರುಪಾಯಿ ಲಂಚ ಮುಟ್ಟದ ಬಂಡೆ, ಎಸ್‍ಐ ಆಗಿದ್ದರೂ ಯಾವ ರಾಜಕಾರಣಿಗಳಿಗೂ ಕೇರ್ ಮಾಡುತ್ತಿರಲಿಲ್ಲ. ಯಾರಾದರೂ “ರಾಜಕಾರಣಿಯ ಮಗ ನಾನು” ಎಂದರೆ ಖುದ್ದು ಅವನನ್ನು ಜೈಲಿಗಟ್ಟುವ ತನಕವೂ ನಿದ್ರಿಸುತ್ತಿರಲಿಲ್ಲ ಬಂಡೆ. ಇಂಥ ಅಧಿಕಾರಿಯನ್ನ ಕರ್ನಾಟಕ ಕಳೆದುಕೊಂಡಿತ್ತು. ಆಗ ಎಲ್ಲ ಪಕ್ಷದ ರಾಜಕಾರಣಿಗಳೂ ಪ್ರಕರಣದ ಬಗ್ಗೆ ಸರಿಯಾಗಿ ಮಾತನಾಡದೇ, ಗಮನಹರಿಸದೇ, ಬಂಡೆ ಅಸುನೀಗಿದ ಎಂದು ಖಾತ್ರಿಯಾದ ಬಳಿಕ “ಅಯ್ಯೋ ಹೀಗಾಗಬಾರದಿತ್ತು” “ಆತ ಒಬ್ಬ ದಕ್ಷ ಅಧಿಕಾರಿಯಾಗಿದ್ದ” ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಈಗ ಆಗಿರುವುದೂ ಅದೇ, ರವಿಯ ದೇಹ ಸಿಕ್ಕಾಗ ಕೆಲ ರಾಜಕಾರಣಿಗಳು ಹೇಳಿದ್ದು ಮೇಲ್ನೋಟಕ್ಕೆ ಆತ್ಮಹತ್ಯೆಯ ರೀತಿ ಕಾಣಿಸುತ್ತಿದೆಯೆಂದು. ನಾವು ಸೂಕ್ಷವಾಗಿ ಗಮನಿಸಬೇಕಾದ್ದು ಇಲ್ಲೇ. ರವಿ ಸಾವನ್ನಪ್ಪಿದ್ದಾರೆ ಎಂದು ತಿಳಿದ ಕೇವಲ 1 ಗಂಟೆಯಲ್ಲಿ ಮಾಧ್ಯಮಗಳು, ರವಿಯ ಜಾತಕವನ್ನೇ ಹೊರ ತೆಗೆದು, ಇದು ಆತ್ಮಹತ್ಯೆ ಅಲ್ಲವೇ ಅಲ್ಲ ಎಂದು ಸುದ್ದಿ ಪ್ರಕಟಿಸಿದರು. ಈ ಬಗ್ಗೆ ಕಾಂಗ್ರೆಸ್ ಬಿಟ್ಟು ಇನ್ನಿತರ ರಾಜಕಾರಣಿಗಳನ್ನು ಕೇಳಿದರೆ, ಇದು ಆತ್ಮಹತ್ಯೆಯಲ್ಲ ಎಂದರು. ಆದರೆ ಗೃಹ ಸಚಿವ ಜಾರ್ಜ್‍ಗೆ ಮಾಧ್ಯಮಗಳು ಕರೆ ಮಾಡಿದಾಗ “ಇದರ ಬಗ್ಗೆ ನಾನೂ ಈಗಲೇ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ, ಸಂಪೂರ್ಣ ತನಿಖೆ ನಡೆದ ಮೇಲಷ್ಟೇ ಮುಂದೆ ಹೇಳಬೇಕು” ಎಂದು ಕರೆ ಕಡಿತಗೊಳಿಸಿದರು. ಈ ಮುತ್ತಿನಂಥ ಮಾತನ್ನು ಅವರ ಬಾಯಿಂದಲೇ ನಾವು ಕೇಳಿ ತಿಳಿದುಕೊಳ್ಳಬೇರಲಿಲ್ಲ. ಆದರೂ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಹಾಗೆ ಏನೇನೋ ಹೇಳಿಕೆ ಕೊಡಬಾರದು ಎಂದು ತನಿಖೆ ನಡೆದ ಮೇಲೆ ಹೇಳುತ್ತೇವೆ ಎಂದಿದ್ದಾರೆಂದೇ ತಿಳಿಯೋಣ. ಆದರೆ, ಮಾರನೆಯ ದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಲಿಖಿತ ರೂಪದಲ್ಲಿ ತಿಳಿಸುತ್ತಾರೆ “ಇದು ಆತ್ಮಹತ್ಯೆ ಎಂದು ಕಂಡುಬರುತ್ತಿದೆ” ಎಂದು. ಅದು ಹೇಗೆ ಸ್ವಾಮಿ? ಕೇವಲ 12ಗಂಟೆಗಳ ಹಿಂದೆ ಮಾಧ್ಯಮಗಳು ಏನಾಯ್ತು ಎಂದು ಕೇಳಿದಾಗ ಗೊತ್ತಿಲ್ಲ ಎಂದಿದ್ದ ಸಚಿವ ಜಾರ್ಜ್‍ಗೆ ಮಾರನೇಯ ದಿನ, ಇದ್ದಕ್ಕಿದ್ದಂತೆ ಇದು ಆತ್ಮಹತ್ಯೆ ಎಂದು ಹೇಳಲು ಕನಸು ಬಿದ್ದಿತ್ತೇ? ಕೆಲವೇ ಗಂಟೆಗಳಲ್ಲಿ ಮಾಧ್ಯಮಗಳಿಗೇ ಹೇರಳ ಮಾಹಿತಿ ಸಿಕ್ಕಿರುವಾಗ, ರಾಜ್ಯದ ಗೃಹ ಸಚಿವರಾದ ಜಾರ್ಜ್‍ಗೆ ಯಾವ ಮಾಹಿತಿಯೂ ಇಲ್ಲ ಎಂದು ನಂಬುವುದಾದರೂ ಹೇಗೆ? ಮಾಹಿತಿಯೇ ಇಲ್ಲದ ಆಸಾಮಿಗೆ ಆತ್ಮಹತ್ಯೆ ಎಂದು ಅನಿಸಿದ್ದಾದರೂ ಹೇಗೆ? ಇನ್ನು ಕಾಂಗ್ರೆಸ್‍ನ ಯಾವ ರಾಜಕಾರಣಿಯನ್ನು ಮಾಧ್ಯಮಗಳು ಮಾತನಾಡಿಸಿದರೂ ಅವರಿಗೇನೂ ಗೊತ್ತಿಲ್ಲದಿರುವುದು ಅನುಮಾನಾಸ್ಪದವಾಗಿದೆ. ಮಲ್ಲಿಕಾರ್ಜು ಖರ್ಗೆಯಂತೂ ಒಂದು ಹೆಜ್ಜೆ ಮುಂದೆ ಹೋಗಿ, ರವಿ ಸಾವಿಗೆ ಮೋದಿ ಸರ್ಕಾರ ಕಾರಣ ಎಂದು ಸಾವಿನ ಮನೆಯಲ್ಲೂ ಹಾಸ್ಯ ಮಾಡಿದ್ದಾರೆ. ಒಬ್ಬ ಅಧಿಕಾರಿ ನೀಯತ್ತಾಗಿ ಕೆಲಸ ಮಾಡಿದರೆ ಅವನಿಗೆ ಸಾವೇ ಬಹುಮಾನವಾಗುವುದಾರೇ, ಅವರ ಜೀವಕ್ಕೆ ಬೆಲೆಯೇ ಇಲ್ಲವೇ?

ಇತ್ತೀಚಿನ ದಿನಗಳಲ್ಲಿ ಕರ್ನಾಟಕವು ಅಕ್ಷರಶಃ ಬಿಹಾರ್ ಮತ್ತು ಉತ್ತರಪ್ರದೇಶದ ಮಾದರಿಯಲ್ಲೇ ರೌಡಿ ರಾಜ್ಯವಾಗುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಉಗ್ರಗಾಮಿ ಮೆಹ್ದಿ ಮತ್ತಿನ್ನಿತರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಅಭಿಶೇಕ್ ಗೋಯಲ್‍ರನ್ನು ವರ್ಗಾವಣೆಯ ಶಾಪ ತಟ್ಟಿದೆ. ಅಭಿಶೇಕ್ ಅದೆಷ್ಟು ಬುದ್ಧಿವಂತರೆಂದರೆ, ಮೆಹ್ದಿ ಮತ್ತು ಇನ್ನಿತರ ಉಗ್ರಗಾಮಿಗಳ ಪ್ರಕರಣವನ್ನು ಒಂದು ಹಂತಕ್ಕೆ ತಂದಿದ್ದರು. ಮೂಲಗಳ ಪ್ರಕಾರ ಅಭಿಶೇಕ್ ಗೋಯಲ್ ಉಗ್ರಗಾಮಿಗಳ ಪ್ರಕರಣದಲ್ಲಿ ಮುನ್ನಡೆ ಸಾಧಿಸಿದ್ದೇ ಕೆಲ ರಾಜಕಾರಣಿಗಳಿಗೆ ಹಾಗೂ “ಅಧಿಕಾರಿಗಳಿಗೆ” ಉರಿ ಬಿದ್ದಿತ್ತು. ಎಲ್ಲಿ ತಮ್ಮ ಸದ್ಗುಣಗಳು ಬಟಾಬಯಲಾಗುವುದು ಎಂದು ಅಭಿಶೇಕ್‍ರನ್ನು ಅತ್ತಂಗಡಿ ಮಾಡಿದ್ದಾರೆ. ಅಭಿಶೇಕ್ ಜಾಗಕ್ಕೆ ಈಗ ಬಂದಿರುವ ಅಧಿಕಾರಿ ಕೇಸ್ ಸ್ಟಡಿ ಮಾಡಿ, ಮಾಹಿತಿಗಳನ್ನು ಕಲೆಹಾಕುವಷ್ಟರಲ್ಲಿ ಇನ್ನಷ್ಟು ವರ್ಷಗಳು ಕಳೆಯುತ್ತವೆ. ಅಲ್ಲಿಯವರೆಗೆ ರಾಜಕಾರಣಿಗಳು ಮತ್ತು “ಅಧಿಕಾರಿಗಳು” ಏನು ಮಾಡಬೇಕೋ ಮಾಡಿ ಮುಗಿಸಿರುತ್ತಾರೆ. ಇನ್ನು ಕರ್ನಾಟಕ ಎಷ್ಟರ ಮಟ್ಟಿಗೆ ಅಸುರಕ್ಷಿತ ರಾಜ್ಯವಾಗಿ ಬೆಳೆಯುತ್ತಿದೆಯೆನ್ನುವುದಕ್ಕೆ ಎರಡು ತಾಜಾ ಉದಾಹರಣೆ ಕೊಡುತ್ತೇನೆ ಕೇಳಿ.

2013ರಲ್ಲಿ ಲಷ್ಕರ್ ಎ ತಯ್ಬಾದ ಉಗ್ರರು ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ವಿಶ್ವೇಶ್ವರ ಭಟ್ಟರ ಮತ್ತು ಪ್ರಖ್ಯಾತ ಪತ್ರಕರ್ತರು ಹಾಗೂ ಕೇಂದ್ರ ಸಂಸದ ಪ್ರತಾಪ್ ಸಿಂಹರನ್ನು ಹತ್ಯೆ ಮಾಡಲು ಹೊಂಚು ಹಾಕಿತ್ತು. ಈ ಯೋಜನೆಗೆ “ಮಿಷನ್ ಕಿಲ್ ಪ್ರತಾಪ್” ಎಂಬ ಹೆಸರಿಡಲಾಗಿತ್ತು ಎಂದು ಉಗ್ರರ ಲ್ಯಾಪ್‍ಟಾಪ್‍ನಲ್ಲಿ ಸಿಕ್ಕಿದ್ದ ಫೈಲ್‍ಗಳು ಹೇಳಿತ್ತು. ಅದೃಷ್ಟವಶಾತ್ ಉಗ್ರಗಾಮಿಗಳು ಸಿಕ್ಕಿಬಿದ್ದಿದ್ದರಿಂದ ಕೂದಲೆಳೆಯ ಅಂತರದಲ್ಲಿ ಇಬ್ಬರು ದಿಗ್ಗಜರು ಬದುಕುಳಿದರು. ಆದರೆ, ಕರ್ನಾಟಕದ ಎಷ್ಟು ಮಂದಿ ಹೀಗೆ ಸಾವಿನ ದವಡೆಯಿಂದ ಪಾರಾಗುತ್ತಾರೆ? ನಿಮಗೆ ನೆನಪಿರಬಹುದು, ಕೆಲ ತಿಂಗಳುಗಳ ಹಿಂದೆ ತೀರ್ಥಹಳ್ಳಿಯ ನಂದಿತಾಳ ಕೊಲೆಯಾಗಿತ್ತು. ಆಗಲೂ ನಂದಿತಾಳ ಕೊಲೆಗಾರರನ್ನು ಬಚಾವ್ ಮಾಡಲು ಸಾಕಷ್ಟು ಪ್ರಯತ್ನ ಪಟ್ಟು ಸಫಲರಾಗಿದ್ದರು. ಈ ಪ್ರಕರಣದಲ್ಲಿ ದೊಡ್ಡ ಮನುಷ್ಯರ ಹೆಸರೂ ಕೇಳಿಬಂದಿದ್ದವು. ಆಗಲೂ ಗೃಹ ಸಚಿವ ಜಾರ್ಜ್ ಹೇಳಿದ್ದೂ ಅದೇ ಮಾತು “ತನಿಖೆಯಾದ ಬಳಿಕವಷ್ಟೇ ಅಪರಾಧಿಗಳು ಯಾರು ಎಂದು ಗೊತ್ತಾಗುತ್ತದೆ” ಎಂದು. ಸಾರ್ವಜನಿಕರೆಲ್ಲರೂ ಹೋರಾಟ ಮಾಡಿದ್ದರಿಂದ, ಜನರ ಕಣ್ಣಿಗೆ ಬೆಣ್ಣೆ ಒರೆಸಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸದೇ ಸಿಐಡಿ ಕೈ ಮೇಲಿಟ್ಟಿದ್ದರ ಪರಿಣಾಮ “ಓದಿನಲ್ಲಿ ಹಿಂದಿದ್ದ ನಂದಿತಾಳೇ ಆತ್ಮಹತ್ಯೆ ಮಾಡಿಕೊಂಡಳು” ಎಂಬ ವರದಿ ಕೊಟ್ಟು ಕೈತೊಳೆದುಕೊಂಡರು. ಈಗ ಅದೇ ರೀತಿಯಲ್ಲಿ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಕೊಡದೇ ಮೀನ ಮೇಷ ಎಣಿಸುತ್ತಿದ್ದಾರೆಂದರೆ, ಇದಕ್ಕೂ ಆತ್ಮಹತ್ಯೆಯೆಂಬ ಬಣ್ಣ ಬಳಿದು ಫೈಲ್ ಮುಚ್ಚಿಡುವ ಎಲ್ಲ ಸಾಧ್ಯತೆಗಳಿವೆ. ಇದಕ್ಕೆ ಮುನ್ಸೂಚನೆಯೆಂಬಂತೆ, ಬಿಜೆಪಿ-ಜೆಡಿಎಸ್, ರಾಜ್ಯದ ರಾಜಕಾರಣಿಗಳು ಶಾಮೀಲಾಗಿರುವುದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದಾಗ, ಕಾಂಗ್ರೆಸ್ ಕೊಡುವ ಜಾಣತನದ ಉತ್ತರವೇನು ಗೊತ್ತಾ? ಈ ಹಿಂದೆ ಕೊಟ್ಟಿದ್ದ ಸೌಜನ್ಯಾ ಪ್ರಕರಣವನ್ನು ಭೇದಿಸಲು ವಿಫಲರಾಗಿದ್ದಾರೆ. ಹಾಗಾಗಿ ಅವರಿಗೆ ಕೊಡುವ ಮಾತೇ ಇಲ್ಲ ಎಂದರು. ಹಾಗೆ ನೋಡಿದರೆ ಸಿಐಡಿ ಬಳಿಯೂ ಸುಮಾರು 7 ಕೇಸ್‍ಗಳಿವೆ. ಯಾವುದಕ್ಕೂ ಉತ್ತರವೇ ಇಲ್ಲ. ಮಲ್ಲಿಕಾರ್ಜಿನ್ ಬಂಡೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದರಿಂದ ಏನಾಯಿತು? ಎಂದು ವಿಪಕ್ಷಗಳು ಪ್ರಶ್ನಿಸಿದಾಗ ಕಾಂಗ್ರೆಸ್ ಬಳಿ ಉತ್ತರವೇ ಇರಲಿಲ್ಲವಂತೆ. ಏನೇ ಆಗಲಿ, ರವಿ ಸಾವು ಹಾಗೂ ಇನ್ನಿತರ ಅಧಿಕಾರಿಗಳ ಸಾಲು ಸಾಲು ಸಾವಿನಿಂದ ತಿಳಿಯುವುದೇನೆಂದರೆ, ಕರ್ನಾಟಕದಲ್ಲಿ ಯಾವತ್ತಿಗೂ ದಕ್ಷ ಅಧಿಕಾರಿಗಳು ಒಂದೋ ವರ್ಗಾವಣೆಯಾಗುತ್ತಾರೆ ಅಥವಾ ಹೆಣವಾಗುತ್ತಾರೆ.

ರವಿ ಸಾವಿಗೆ ಇಡೀ ಕರ್ನಾಟಕವೇ ಮರುಗಿದೆ. ವಿಷಯ ತಿಳಿದೊಡನೆ, ಸಂಬಂಧವೇ ಇಲ್ಲದ ಎಷ್ಟೋ ಜನ ಕಣ್ಣೀರಿಟ್ಟಿದ್ದಾರೆ. ಅಷ್ಟೇ ಏಕೆ? ರವಿ ಶವವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟಾಗ ಅವರು ಸಾಕಿದ ನಾಯಿ, ಅಷ್ಟು ಜನಸಂದಣಿಯಲ್ಲೂ ಎಲ್ಲಿಂದಲೋ ಬಂದು ರವಿಯ ಮೇಲೆ ತನ್ನ ಎರಡೂ ಕೈಗಳಿಟ್ಟು ಕಣ್ಣೀರಿಡುತ್ತಿದ್ದನ್ನು ನೋಡಿ ಅಲ್ಲಿದ್ದ ಜನರು dumbfounded(ಮಾತಾಡಲು ಪದಗಳೇ ಇಲ್ಲವಾಗುವುದು) ಆಗಿದ್ದರು. ಒಂದು ನಾಯಿಗೂ ಗೊತ್ತು ರವಿಯ ಬೆಲೆ. ಆದರೆ ಕೆಲ ಬ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಜೀವದ ಬೆಲೆ ತಿಳಿಯದೇ ನಾಯಿಗಿಂತಲೂ ಕಡೆಯಾದರು. ಮಾಧ್ಯಮದವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ರವಿ ಹೇಳಿದ್ದನ್ನು ನೆನೆಸಿಕೊಂಡರೆ ಈಗಲೂ ರೋಮಗಳೆಲ್ಲ ಎದ್ದು ನಿಲ್ಲುತ್ತೆ. “ಆಗಿದ್ದಾಗಲಿ ಸಾರ್, ಯಾರ್ಯಾರು ಇನ್ವಾಲ್ವ್ ಆಗಿದ್ದಾರೆ ಅವರೆಲ್ಲರ ಮೇಲೂ ಕೇಸ್ ಬುಕ್ ಮಾಡ್ತೀನಿ. ಸಾರ್ವಜನಿಕರ ಸ್ವತ್ತಿನ ವಿಚಾರವಾಗಿ ನಾನು ಜೈಲಿಗೆ ಹೋದರೂ ಪರವಾಗಿಲ್ಲ ರೀ, I WILL FIGHT!”. ಫೈಟ್ ಮಾಡುತ್ತಿದ್ದ ಯೋಧನ ಕತ್ತು ಕೊಯ್ದೇ ಬಿಟ್ಟರು. ಅಲ್ಲಿಗೆ ಕರ್ನಾಟಕವೆಂಬ ಕಿರೀಟದಲ್ಲಿದ್ದ ಮೊತ್ತೊಂದು ರತ್ನವೂ ಕಳಚಿ ಬಿದ್ದಿತ್ತು. #DKRavi
—- ಚರಂಜೀವಿ ಭಟ್,
mechirubhat@gmail.com

217 thoughts on “ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳಿಗೆ ಒಂದೋ ವರ್ಗಾವಣೆ, ಅಥವಾ ಸಾವೆಂಬ ಬಹುಮಾನ!

 1. http://sanmarga.com/wp-content/uploads/2015/03/pdti00ggghada_medium.jpg

  ಸಾವಿನ ಮನೆಯಲ್ಲಿ ರಾಜಕೀಯದಾಟ

  ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿಯವರ ಸಾವು ರಾಜ್ಯ ರಾಜಕಾರಣ ದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಈ ಸಾವಿನ ನೈಜ ಕಾರಣ ವನ್ನು ಅರಿಯಲು ಈ ನಾಡಿನ ಜನತೆ ಕುತೂಹಲದಿಂದ ಎದುರು ನೋಡುತ್ತಿದೆ. ಭ್ರಷ್ಟರ, ಲೂಟಿಕೋರರ, ಮಾಫಿಯಾ ಗಳ, ತೆರಿಗೆ ಕಳ್ಳರ ವಿರುದ್ಧವಾಗಿ; ಮರ್ದಿತರ ಮತ್ತು ದಮನಿತರ ಪರವಾಗಿ ದನಿಯೆತ್ತಿದವರ ಸದ್ದಡಗಿಸುವ ಕಾರ್ಯ ಈ ದೇಶದಲ್ಲಿ ಬಹಳಷ್ಟು ನಡೆದಿದೆ. ಮುಂಬೈಯ ದಾಬೋಲ್ಕರ್, ಪನ್ಸಾರೆ, ಮಂಗಳೂರಿನ ನೌಶಾದ್ ಕಾಶಿಮ್‍ಜಿ ಮುಂತಾದವರು ದಮನಿತರ ಪರವಾಗಿ ದನಿಯೆತ್ತಿದ್ದಕ್ಕೆ ತಮ್ಮ ಪ್ರಾಣವನ್ನೇ ಬಲಿ ನೀಡಬೇಕಾಯಿತು. ಆದ್ದರಿಂದಲೇ ನ್ಯಾಯ ಮತ್ತು ಅನ್ಯಾಯದ ವಿಚಾರ ಬಂದಾಗ ಈ ಧೀಮಂತರು ನೆನಪಾಗು ತ್ತಾರೆ. ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಜನರು ಬೆಂಬಲಿಸುತ್ತಾರೆ ಎಂಬುದಕ್ಕೆ ಡಿ.ಕೆ. ರವಿಯವರ ಸಾವಿನ ನಂತರ ಜನರು ಅವರಿಗೆ ನೀಡುತ್ತಿರುವ ಅಭೂತ ಪೂರ್ವ ಬೆಂಬಲವೇ ಸಾಕ್ಷಿ.
  ಆದರೆ ವಿರೋಧ ಪಕ್ಷಗಳ ನಡೆ ಯನ್ನು ನೋಡಿದಾಗ ಡಿ.ಕೆ. ರವಿಯವರ ಸಾವಿನ ಕುರಿತ ನ್ಯಾಯೋಚಿತವಾದ ವರದಿಗಿಂತ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಹುನ್ನಾರವಿದೆಯೋ ಎಂಬ ಅನುಮಾನ ಮೂಡುತ್ತಿದೆ. ಅವು ಡಿ.ಕೆ. ರವಿಯವರ ಅನುಮಾನಾಸ್ಪದ ಸಾವು ಆತ್ಮಹತ್ಯೆಯಾಗದಿರಲಿ ಎಂದು ಹಪ ಹಪಿಸುತ್ತಿವೆ. ಇದು ರವಿಯವರಿಗೆ ಮಾಡುತ್ತಿರುವ ಅವಮಾನವೇ ಸರಿ.
  ಇಷ್ಟಕ್ಕೂ ಈ ಸಾವಿನ ಹಿಂದೆ ಪ್ರೇಮ ಪ್ರಕರಣವಿದೆ ಎಂದೂ ಹೇಳಲಾಗುತ್ತಿದೆ. ಮಂಡ್ಯ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿಯವರನ್ನು ಪ್ರೀತಿಸಿ ದ್ದರು, ಅವರಿಗೆ ಸಾಯುವ ದಿನ 44 ಬಾರಿ ಕರೆ ಮಾಡಿದ್ದರು ಮುಂತಾದ ಸುಳಿವುಗಳು ಹೊರಬರುತ್ತಿವೆ. ಮಾತ್ರವಲ್ಲ, ಮರಣೋತ್ತರ ಪರೀಕ್ಷೆ ಕೂಡಾ ತಹ ಶೀಲ್ದಾರರ ಸಮ್ಮುಖದಲ್ಲಿ ನಡೆದಿದೆ. ಕುತ್ತಿಗೆಯ ಭಾಗವನ್ನು ಹೊರತು ಪಡಿಸಿ ಬೇರೆ ಯಾವುದೇ ಭಾಗದಲ್ಲಿ ಗಾಯದ ಗುರುತು ಇಲ್ಲ. ಹಂತಕರು ಕೊಲ್ಲಲು ಯತ್ನಿಸಿದ್ದರೆ ಪ್ರತಿರೋಧ ವ್ಯಕ್ತಪಡಿಸು ವಾಗ ಬಟ್ಟೆ ಸುಕ್ಕು ಗಟ್ಟಬೇಕಾಗಿತ್ತು. ಕೊಲೆ ಎಂಬುದಕ್ಕೆ ಸಣ್ಣ ಕುರುಹೂ ದೊರೆತಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲ ಯದ ವರದಿ ತಿಳಿಸುತ್ತದೆ. ದಕ್ಷ ಅಧಿಕಾರಿ ಯಾಗಿದ್ದರೂ ಅವರಲ್ಲಿಯೂ ವೈಯಕ್ತಿಕ ವಿಷಯಗಳು ಇರಬಾರದೆಂದೂ ಇಲ್ಲ ವಲ್ಲ. ಹಾಗಂತ ಎಲ್ಲ ಮಕ್ಕಳು ತಮ್ಮ ಮಾತಾಪಿತರಲ್ಲಿ ತಮ್ಮ ಖಾಸಗಿ ವಿಷಯ ವನ್ನು ಹಂಚಿಕೊಳ್ಳುತ್ತಾರೆಂದು ಹೇಳ ಲಾಗದು.
  ಪ್ರಮುಖ ವಿರೋಧ ಪಕ್ಷವಾದ ಬಿ.ಜೆ.ಪಿ. ಕೂಡಾ ಈ ನಿಟ್ಟಿನಲ್ಲಿ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಹೋರಾಟ ನಡೆಸು ತ್ತಿರುವ ಬಿ.ಜೆ.ಪಿ.ಯು ತನ್ನ ಅಧಿಕಾರದ ಅವಧಿಯಲ್ಲಿ ಪದ್ಮಪ್ರಿಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹಿಂಜರಿ ದಿತ್ತು. ನಂದಿತಾ ಸಾವು ನಡೆದಾಗಲೂ ಕೊಲೆ, ಅತ್ಯಾಚಾರ ಎಂದೆಲ್ಲಾ ರಂಪಾಟ ಮಾಡಿದ ಬಿ.ಜೆ.ಪಿ. ಸತ್ಯಾಂಶ ಹೊರ ಬಂದಾಗ ಮತ್ತೆ ಸುಮ್ಮನಾದದ್ದು ಬಹಿ
  ರಂಗವಾದ ವಿಚಾರ. ಹಾಗೆಯೇ ಗುಜರಾತ್‍ನಲ್ಲಿ 2002ರಲ್ಲಿ ನಡೆದ ನರ ಮೇಧಕ್ಕೆ ಆಗಿನ ಗೃಹ ಸಚಿವರೂ ಮುಖ್ಯ ಮಂತ್ರಿಯೂ ಆಗಿದ್ದ ನರೇಂದ್ರ ಮೋದಿ ಹೊಣೆಗಾರ ಅಲ್ಲವೆನ್ನುತ್ತಿರುವ ಬಿಜೆಪಿಗೆ ಡಿ.ಕೆ. ರವಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೊಂದಿದ್ದಾರೆಂಬಂತೆ ಮಾತನಾಡುವ ನೈತಿಕ ಹಕ್ಕು ಇದೆಯೇ?
  ಲ್ಯಾಂಡ್ ಮಾಫಿಯಾಗಳು, ಭ್ರಷ್ಟರು ಡಿ.ಕೆ. ರವಿಯವರನ್ನು ಸತಾಯಿಸಿರ ಬಹುದು. ಒಂದು ವೇಳೆ ಅವರದೇ ಒತ್ತಡದಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದಾದರೆ ಅಥವಾ ಹತ್ಯೆಯಾದರೆ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಲೇ ಬೇಕು. ಇಷ್ಟಕ್ಕೂ ಈ ಪ್ರಕರಣ ಇಷ್ಟೊಂದು ಕಾವು ಪಡೆಯಲು ಪೆÇಲೀಸ್ ಆಯಕ್ತ ಎನ್.ಎಂ. ರೆಡ್ಡಿ ಮಾಡಿದ ಎಡವಟ್ಟುಗಳೇ ಕಾರಣ. ಇದು ಆತ್ಮಹತ್ಯೆ ಎಂದು ಅವರು ಬಹಳ ಬೇಗ ಷರಾ ಬರೆದು ಬಿಟ್ಟಿದ್ದರು.
  ಇಂತಹ ಪ್ರಕರಣಗಳಲ್ಲಿ ರಾಜ್ಯ ಸರಕಾರಕ್ಕೆ ಸಿಐಡಿ ಮೇಲೆ ನಂಬಿಕೆ ಇದ್ದರೆ, ವಿರೋಧ ಪಕ್ಷಗಳು ಸಿಬಿಐ ತನಿಖೆಗೆ ಒತ್ತಾಯಿಸುವುದು ಸಹಜ. ಆದರೆ ಈ ಕೋಳಿ ಜಗ¼ Àದಲ್ಲಿ ನ್ಯಾಯ ಸಾಯಬಾರದು. ನಿಷ್ಠಾವಂತ ಅಧಿಕಾರಿಗಳು ಕೂಡಾ ಯಾವುದೇ ಕಾರಣಕ್ಕೂ ತಾಳ್ಮೆಗೆಡಬಾರದು. ಈ ಪ್ರಕರಣದಿಂದಲೇ ಈ ನಾಡಿನ ಜನ ಅವರ ಮೇಲೆ ಅದೆಷ್ಟು ಅಗಾಧವಾದ ನಂಬಿಕೆ ಇರಿಸಿದ್ದಾರೆಂಬುದನ್ನು ಅರ್ಥೈಸ ಬಹುದಾಗಿದೆ. ಆದ್ದರಿಂದ ಜನತೆ ತಮ್ಮ ಮೇಲಿಟ್ಟಿರುವ ಭರವಸೆಯನ್ನು ದಕ್ಷ ಅಧಿಕಾರಿಗಳು ಹುಸಿಗೊ ಳಿಸಬಾರದು.

 2. “ವಿರೋಧ ಪಕ್ಷದವರ ಅಪ್ರಾಮಾಣಿಕವಾದ ಹಾರಾಟ ಮೃತದೇಹದ ಮೇಲೆ ಮುಗಿಬಿದ್ದ ಹಸಿದ ರಣಹದ್ದುಗಳಂತಿದೆ. ಈ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ನಾಯಕರು ತಮ್ಮ ಪಕ್ಷದ ಮಾಜಿ ಶಾಸಕ ರಘಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಲು ತಮ್ಮ ಶ್ರಮವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರವಿ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ಮುಂದಾಗಿರುವುದರಿಂದ, ಬಿಜೆಪಿ ನಾಯಕರು ತಮ್ಮ ಮುಂದಿನ ಹೋರಾಟವನ್ನು ಈ ಹತಭಾಗ್ಯ ಮಹಿಳೆಯರ ಕಡೆಗೆ ತಿರುಗಿಸಲಿ”

 3. 【関連キーワード】ガーデンファニチャー ガーデンテーブル ガーデンチェアー イス 庭 スウィングベンチ バルコニー 椅子 モザイクテーブル インテリア いす テーブルセット テラス デザイン かわいい オシャレ シンプル コンパクト テラス ベランダ 野外 パーティー アウトドア おしゃれ お洒落 素敵 折りたたみ デッキ シック 可愛い イス 椅子 ナチュラル 屋外 イベント モダン ティータイム すてき ステキ エレガント 高級感タンジールモザイクセット マットグリーン HQ M11SG【タカショー】【smtb KD】【送料無料】【RCP】 テーブル1台・チェアー2脚のセット。
  鑷虎杌?dahon http://www.brazilcor.com.br/common/html/zrvwiel_r6s6.html

 4. ブラックベリーピンク フットスリーブ構造が優れたフィット性を発揮! SpEVAと低硬度スポンジ素材の優れたクッション性が、軽量かつ快適な履き心地を実現! コート競技専用ラストを採用し、多方面への激しい動きに対応するフィット性を実現!こちらの商品は即納できます!。
  銉兂銈恒儠銉笺儔 canon http://www.cansar.org/Classes/PHPMailer/gcyelrj_q0i3.html

 5. I savour, lead to I discovered just what I used
  to be taking a look for. You’ve ended my 4 day long hunt!

  God Bless you man. Have a great day. Bye

 6. Thank you for every other informative website. Where
  else may just I get that type of info written in such a perfect
  means? I’ve a project that I am just now working on, and I have
  been at the glance out for such information.

 7. I simply want to tell you that I’m newbie to blogging and site-building and absolutely loved your blog site. Likely I’m planning to bookmark your blog post . You definitely have fantastic well written articles. Thanks a lot for revealing your web-site.

 8. I just want to tell you that I am all new to weblog and seriously savored this web site. Likely I’m likely to bookmark your site . You certainly have very good well written articles. Thanks for sharing with us your blog.

 9. Great goods from you, man. I’ve take note your stuff previous to and you’re simply extremely wonderful. I really like what you have obtained right here, really like what you are saying and the best way by which you say it. You’re making it entertaining and you continue to take care of to stay it wise. I can’t wait to learn far more from you. This is really a tremendous website.

 10. Fаntastic site. Plenty of helpful info here. I am sending it to a fеw pals ans аlƿso sharing in delicious.
  And certainly, thanks for yojr effoгt!

 11. I just want to tell you that I’m beginner to blogging and site-building and truly savored your website. Probably I’m planning to bookmark your blog . You actually have beneficial articles. Thanks a bunch for revealing your web site.

 12. I just want to mention I am just new to weblog and certainly loved this blog site. More than likely I’m going to bookmark your site . You definitely have incredible articles and reviews. Bless you for sharing with us your blog.

 13. 「【送料無料】asics(アシックス) TTP505 0150【ユニセックス・メンズ】HEATSPRINT FR 6(ヒートスプリント FR 6)陸上 シューズ」の「価格」「在庫状況」等は、ショップのロゴ、または「ショップへ」ボタンをクリックした後、必ず各オンラインショップ上でご確認ください。
  銉曘偐銉笺偍銉愩兗21 锛淬偡銉c儎 http://www.alisonwatkiss.co.uk/news/html/bnp620_hsvji-061.html

 14. 「【TJL423 9023】【10000円(税抜)→8400円】【送料 無料】【ランニングシューズ】アシックス CYBERRACER サイバーレーサー(ブラックレッド)在庫取寄商品のため、在庫がない場合もございます。
  銉堛儶銉冦偒銉笺偤銉兂銈兗銉栥兗銉勩偝銉炪兂銉夈偨銉笺儷 http://www.twirlingtoddlers.co.uk/temps/include/nwh967_kvdfn-863.html

 15. Pingback: his response
 16. Pingback: relevant web page
 17. Pingback: Guadeloupe
 18. Pingback: popular kids shows
 19. Pingback: diet diabetes
 20. Pingback: Bright Flashlight
 21. Pingback: pets care jobs
 22. Pingback: Simon Flashlight
 23. Pingback: Soccer Coaching
 24. Pingback: Birds (play)
 25. Pingback: mandolin picks
 26. Pingback: Animals (EP)
 27. Pingback: Simon Flashlight
 28. Pingback: here.
 29. Try the pants on and imagine if you would wish to be seen in them beyond the home.
  In this scenario, it may allow you to order one or two pairs of the same shoes in different sizes just to see which
  fits best. Secondly, a nice sundress with a low-cut back (just enough to give it a classy look), and
  finally, a nice pair of slacks with a silk or sequined camisole or top.

  The stereotype of striped shirts and berets is, of course, not a
  reality. When you decide you are ready to have both, look no further than Beauti – Feel.

  Can they think of any other clothes that people wear mostly in summer (swimming suits, sundresses,
  etc. Mix and match these dresses with different accessories
  and styles and make a fashion statement of your own.

 30. Pingback: clock hands
 31. Pingback: notebook modena
 32. Pingback: 18650 battery
 33. Its like you learn my mind! You appear to understand so much approximately this, such as you wrote the book in it or something.

  I feel that you can do with some % to power the message home a little
  bit, however instead of that, this is magnificent blog.
  A great read. I will definitely be back.

 34. Pingback: Oxygen Jet
 35. Pingback: reference
 36. Pingback: fashion up to date
 37. Pingback: Érythrée
 38. Pingback: kids video
 39. Pingback: Google
 40. Pingback: redirected here
 41. I was wondering if you ever thought of changing the page layout of your
  site? Its very well written; I love what youve got to say.
  But maybe you could a little more in the way of content
  so people could connect with it better. Youve got an awful lot of text for only having
  1 or 2 images. Maybe you could space it out better?

 42. we prefer to honor many other world-wide-web internet sites around the internet, even though they arent linked to us, by linking to them. Beneath are some webpages really worth checking out

 43. Pingback: live odds
 44. Pingback: banheira
 45. Pingback: video instructions
 46. Pingback: flashlight police
 47. Pingback: flashlight police
 48. Pingback: Car Service Boston
 49. Pingback: Lake fork lodging
 50. Pingback: Ecograf
 51. Pingback: Math Shortcuts
 52. Pingback: hpi text check
 53. Pingback: email verification
 54. Pingback: stained concrete
 55. Pingback: plumber
 56. Pingback: Austin IT Service
 57. Pingback: stained concrete
 58. Pingback: plumber
 59. Pingback: seo package
 60. Pingback: dr medora clinic
 61. Pingback: movie2k
 62. Pingback: pittsburgh seo
 63. Pingback: lifelock reviews
 64. Pingback: ramalan zodiak
 65. Pingback: dog playpen
 66. Pingback: drain clearing
 67. Pingback: agencja reklamowa
 68. Pingback: pdr training
 69. Pingback: Sex scene
 70. Pingback: Meredith
 71. Pingback: online book store
 72. Pingback: Fix Bad Credit
 73. Pingback: hd porn
 74. Pingback: Shell Scanner
 75. Pingback: free text
 76. Pingback: coffee beans
 77. Pingback: coffee beans
 78. Pingback: Bangla choty
 79. Pingback: Lawyer-tips
 80. Pingback: IOSZIA
 81. Pingback: choti golpo
 82. Pingback: Corded Headsets
 83. Pingback: Opciones Binarias
 84. Pingback: Backlinks
 85. Pingback: invest online
 86. Pingback: ebay deals website
 87. Pingback: Escort
 88. Pingback: double head shot
 89. Pingback: allandale plumber
 90. Pingback: Web Site
 91. Hello just wanted to give you a quick heads up.

  The text in your post seem to be running off the screen in Internet explorer.
  I’m not sure if this is a format issue or something to
  do with internet browser compatibility but I figured
  I’d post to let you know. The design and style look great
  though! Hope you get the problem resolved soon. Kudos

 92. Pingback: pdr training
 93. Pingback: kona coffee
 94. Pingback: Tattoo supply
 95. Pingback: course in pdr
 96. Pingback: coffee beans
 97. Pingback: lion coffee
 98. Pingback: ground coffee
 99. Pingback: kona coffee

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya